ಗಜೇಂದ್ರಗಡ: ‘ಸಮಾಜದಲ್ಲಿನ ಮೌಢ್ಯ, ಅಂಧಕಾರವನ್ನು ತೊಡೆದು ಹಾಕಿ, ಸಮಾನತೆ ಸಾರುವಲ್ಲಿ ಶ್ರಮಿಸಿದ ಬಸವಣ್ಣನವರ ಕಾರ್ಯವನ್ನು ಸ್ಮರಿಸಿ, ಪಾಲಿಸಬೇಕಾದದ್ದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ’ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.

ಗಜೇಂದ್ರಗಡ– ಉಣಚಗೇರಿ ವೀರಶೈವ ಸಮಾಜದ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಬಸವ ಜಯಂತಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬಸವಣ್ಣನವರು ಯಜ್ಞ–ಯಾಗ ಆಚರಣೆ ಹಾಗೂ ಮೂಢನಂಬಿಕೆ ಗಳನ್ನು, ಡಂಭಾಚಾರಗಳನ್ನು ಖಂಡಿಸಿದರು. ಜಾತಿ–ವರ್ಗ ಭೇದ ಗಳನ್ನು ಖಂಡಿಸಿದರು. ಸ್ತ್ರೀ ಸಮಾನತೆಗೆ ಆದ್ಯತೆ ನೀಡಿದರು. ಲಿಂಗ ದೀಕ್ಷೆಗೆ ಲಿಂಗ–ಭೇದವಿಲ್ಲದೆ ಸ್ತ್ರೀಯರೂ ಲಿಂಗ ದೀಕ್ಷೆ ಪಡೆಯಬಹುದು ಎಂದು ಪ್ರತಿಪಾದಿಸಿದರು’ ಎಂದರು.

‘ಕನ್ನಡ ಸಾಹಿತ್ಯದಲ್ಲಿ ವಚನಗಳು ದೊಡ್ಡ ನಿಧಿಯಂತಿವೆ. ಅವು ಸದ್ಗುಣ ಮತ್ತು ನೈತಿಕ ಆದರ್ಶಗಳನ್ನು ಒಳಗೊಂಡಿವೆ. ಬಸವೇಶ್ವರ ಮತ್ತು ಅವರ ಅನುಯಾಯಿಗಳು ಕನ್ನಡದಲ್ಲಿ ಇಂತಹ ವಚನಗಳನ್ನು ಪದ್ಯ–ಗದ್ಯ ರೂಪದಲ್ಲಿ ಬರೆದರು. ಇವು 7000 ಇವೆ. ಅವು ಸರಳವಾಗಿವೆ. ಜನರು ಆಡುವ ಭಾಷೆಯಲ್ಲಿದ್ದರಿಂದ ಕನ್ನಡ ಸಾಹಿತ್ಯದಲ್ಲಿ ಜನಪ್ರಿಯವಾಗಿವೆ. ಅವು ಕನ್ನಡ ಸಾಹಿತ್ಯವನ್ನೇ ಶ್ರೀಮಂತ ಗೊಳಿಸಿವೆ’ ಎಂದರು.

ಇಲ್ಲಿನ ಮೈಸೂರ ಮಠದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ಭಜರಂಗದಳ ವೃತ್ತ, ಗಂಜಿಪೇಟ, ಕಟ್ಟಿಬಸವೇಶ್ವರ ರಂಗ ಮಂದಿರ, ಹಿರೇಬಜಾರ, ಪತ್ತಾರ ಗಲ್ಲಿ, ದುರ್ಗಾವೃತ್ತದ ಮೂಲಕ ಮೆರವಣಿಗೆ ಮೈಸೂರ ಮಠ ತಲುಪಿತು. ಗಜೇಂದ್ರಗಡ ವೀರಶೈವ ಸಮಾಜದ ಅಧ್ಯಕ್ಷ ಬಿ.ಎಂ.ಸಜ್ಜನರ ಮೆರವಣಿಗೆಯ ಅಧ್ಯಕ್ಷತೆ ವಹಿಸಿದ್ದರು.

ವೀರಶೈವ ಸಮಾಜದ ಮುಖಂಡ ರಾದ ಪ್ರಭು ಚವಡಿ, ಎಸ್.ಎಸ್. ಪಟ್ಟೇದ, ನಾಗರಾಜ ಜಾಲಿಹಾಳ, ಬಸವರಾಜ ಬೇಲೇರಿ, ಶರಣಪ್ಪ ರೇವಡಿ, ವೀರೇಶ ನಂದಿಹಾಳ, ಮಹಾಂತೇಶ ಮಳಗಿ, ವೀರೇಶ ನೀಡಶೇಸಿ, ಸಂತೋಷ ಸಂಕನೂರ, ಕಳಕಪ್ಪ ಮಳಗಿ, ಅಂದಪ್ಪ ಸಂಕನೂರ, ಹುಚ್ಚಪ್ಪ ಹಾವೇರಿ, ಸಿದ್ದಪ್ಪ ಚುರ್ಚಿಹಾಳ, ಬಾಬು ಮ್ಯಾಗೇರಿ, ಬಾಬು ರೇವಡಿ, ಗುರುಲಿಂಗಯ್ಯ ಹಿರೇಮಠ ಮೆರವಣಿಗೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.