2–3 ದಿನದಲ್ಲಿ ವಿಶ್ವನಾಥ್‌ ರಾಜೀನಾಮೆ ವಾಪಸ್‌: ಪ್ರಜ್ವಲ್‌ ರೇವಣ್ಣ ವಿಶ್ವಾಸ

ಬುಧವಾರ, ಜೂನ್ 26, 2019
22 °C
‘ದೇವೇಗೌಡ, ಕುಮಾರಸ್ವಾಮಿ ಮನವೊಲಿಕೆ’

2–3 ದಿನದಲ್ಲಿ ವಿಶ್ವನಾಥ್‌ ರಾಜೀನಾಮೆ ವಾಪಸ್‌: ಪ್ರಜ್ವಲ್‌ ರೇವಣ್ಣ ವಿಶ್ವಾಸ

Published:
Updated:

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮನವೊಲಿಕೆ ಹಿನ್ನಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಎಚ್‌.ವಿಶ್ವನಾಥ್‌ ಎರಡು, ಮೂರು ದಿನದಲ್ಲಿ ವಾಪಸ್‌ ಪಡೆಯಲಿದ್ದಾರೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಶ್ವನಾಥ್‌ ಅವರು ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ದರು. ಬುಧವಾರ ನಡೆದ ಜೆಡಿಎಲ್‌ಪಿ ಸಭೆಯಲ್ಲಿ ಶಾಸಕರು, ಸಚಿವರು ಅವರೊಂದಿಗೆ ಚರ್ಚಿಸಿದ್ದಾರೆ. ಶೀಘ್ರ ರಾಜೀನಾಮೆ ವಾಪಸ್‌ ಪಡೆಯಲಿದ್ದು, ಅವರ ಮಾರ್ಗದರ್ಶನದಲ್ಲಿಯೇ ಪಕ್ಷ ಕಟ್ಟುತ್ತೇವೆ ಎಂದರು.

ಇದನ್ನೂ ಓದಿ... ದೇವೇಗೌಡರ ಸೋಲು: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಜ್ವಲ್ ನಿರ್ಧಾರ

‘ನನ್ನ ರಾಜೀನಾಮೆ ವಿಚಾರವನ್ನು ಈಗಲೂ ದೇವೇಗೌಡರ ಮುಂದೆ ಇಟ್ಟಿದ್ದೇನೆ. ಮುಖಂಡರು, ಕಾರ್ಯಕರ್ತರ ಜತೆ ಗೌಡರು ಚರ್ಚಿಸಿದ್ದಾರೆ. ಇದೇ 17 ಅಥವಾ 18ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸುವೆ. ದೇವೇಗೌಡರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ತಿಳಿಸಿದರು.

ಇವನ್ನೂ ಓದಿ...

17ನೇ ಲೋಕಸಭೆಗೆ 17 ಕಿರಿಯ ಸಂಸದರು, ಪ್ರಜ್ವಲ್, ತೇಜಸ್ವಿ ಸೂರ್ಯ ಕೂಡ ಪಟ್ಟಿಯಲ್ಲಿ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !