ಕೊಣನೂರು: ಒಂದೆರಡು ಬಾರಿ ಮಳೆ ಸುರಿದಿದ್ದರಿಂದ ಶುಂಠಿ ಬಿತ್ತನೆ ಮತ್ತು ಹೊಗೆಸೊಪ್ಪು ನಾಟಿ ಚಟುವಟಿಕೆ ಚುರುಕುಗೊಂಡಿವೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪು ನಾಟಿಗೆ ಸಕಾಲವಾಗಿದ್ದು, ಬೆಳೆಗಾರರು ಸಸಿ ಮಡಿಗಳನ್ನು ಬೆಳೆಸುತ್ತಿದ್ದಾರೆ. ಮಳೆ ಬೀಳುವುದು ತಡವಾದರೆ ಅಲ್ಲಿಯವರೆಗೂ ಸಸಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವಂತೆ ಸಸಿಗಳನ್ನು ಕೋಕೊಪಿಟ್ ಟ್ರೇಗಳಲ್ಲಿಟ್ಟು ಕಾಪಾಡಿಕೊಳ್ಳುತ್ತಿದ್ದಾರೆ.

ಅತಿ ಹೆಚ್ಚು ಹೊಗೆಸೊಪ್ಪು ಮತ್ತು ಶುಂಠಿಯನ್ನು ಬೆಳೆಯುವ ಕೊಣನೂರು ಮತ್ತು ರಾಮನಾಥಪುರ ಹೋಬಳಿ ವ್ಯಾಪ್ತಿಯ ಯುಗಾದಿಯ ನಂತರ ಒಂದೆರಡು ಬಾರಿ ಉತ್ತಮ ಮಳೆ ಸುರಿದಿದ್ದು, ಬಹುತೇಕ ಬೆಳೆಗಾರರು ಹೊಲಗದ್ದೆಗಳನ್ನು ಉಳುಮೆ ಮಾಡಿ ಸಿದ್ಧಪಡಿಸಿಕೊಂಡಿದ್ದಾರೆ. ನಾಟಿ ಮಾಡಲು ಇನ್ನೊಂದು ಮಳೆಗಾಗಿ ಎದುರು ನೋಡುತ್ತಿದ್ದಾರೆ.

ನೀರಾವರಿ ಸೌಲಭ್ಯವಿರುವ ಕೆಲವೇ ಹೊಗೆಸೊಪ್ಪು ಬೆಳೆಗಾರರು ಈಗಾಗಲೇ ನಾಟಿ ಮಾಡಿದ್ದು, ರಸಗೊಬ್ಬರ ನೀಡಿ ಆರೈಕೆ ಮಾಡುತ್ತಿದ್ದಾರೆ. ಮಳೆಯಾಶ್ರಿತ ಜಮೀನಿನ ಬೆಳೆಗಾರರು ನಾಟಿ ಮಾಡಲು ಮತ್ತೊಮ್ಮೆ ಮಳೆ ಸುರಿದು ಮಣ್ಣು ತಂಪಾಗಲಿ ಎಂದು ಕಾಯುತ್ತಿದ್ದಾರೆ.

ಶುಂಠಿಯ ಬಿತ್ತನೆ ಫೆಬ್ರುವರಿ ಕೊನೆಯ ವಾರದಿಂದಲೇ ಪ್ರಾರಂಭವಾಗಿದೆ. ಅನೇಕ ಬೆಳೆಗಾರರು ನೀರಿನ ಲಭ್ಯತೆ ಗಮನದಲ್ಲಿ ಇಟ್ಟುಕೊಂಡು, ಒಂದೆರಡು ಮಳೆ ಸುರಿದ ನಂತರ ಬಿತ್ತನೆ ಮಾಡುತ್ತಿದ್ದಾರೆ.

ಶುಂಠಿಗೆ ಕಳೆದ ವರ್ಷ ಬೆಲೆ ಕಡಿಮೆಯಾಗಿದ್ದು, ಈ ವರ್ಷ ಉತ್ತಮ ಬೆಲೆ ದೊರಕುವ ವಿಶ್ವಾಸದಲ್ಲಿ ಮತ್ತೊಮ್ಮೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಶುಂಠಿ ಕೃಷಿ ಮುಂದುವರಿಸಿದ್ದಾರೆ.

ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2024-25 ನೇ ಸಾಲಿನ ಹರಾಜಿನಲ್ಲಿ ಉತ್ತಮ ದರ್ಜೆಯ ತಂಬಾಕಿಗೆ ಕೆಜಿಗೆ ₹365 ಗರಿಷ್ಠ ಬೆಲೆ ದೊರಕಿದ್ದು, ಮಾರಾಟವಾದ ತಂಬಾಕಿನ ಪ್ರತಿ ಕೆಜಿಗೆ ₹257 ಸರಾಸರಿ ಬೆಲೆ ಸಿಕ್ಕಿದೆ. ಒಟ್ಟು 371.43 ಕೋಟಿ ರೂ ವ್ಯವಹಾರ ನಡೆದಿದೆ.

ಕಳೆದ ವರ್ಷ ಬೆಳೆಗಾರರು ಕಡಿಮೆ ದರ್ಜೆಯ ಹೊಗೆಸೊಪ್ಪು ಹೆಚ್ಚು ಉತ್ಪಾದಿಸಿ ಕಡಿಮೆ ಆದಾಯ ಗಳಿಸಬೇಕಾಯಿತು. ಈ ವರ್ಷ ಉತ್ತಮ ಮಳೆ ಸೂಚನೆಗಳಿದ್ದು ಸಿದ್ಧತೆ ಮಾಡಿಕೊಂಡಿದ್ದಾರೆ.
–ಈರೇಗೌಡ ನಿಲುವಾಗಿಲು ಹೊಗೆಸೊಪ್ಪು ಬೆಳೆಗಾರ

ಶುಂಠಿ ದಿಢೀರ್ ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಕೈಗೆ ಸಿಕ್ಕಿಲ್ಲ. ಕೂಲಿಕಾರರ ವೆಚ್ಚ ದುಬಾರಿಯಾಯಿತು. ಈ ವರ್ಷವಾದರೂ ಉತ್ತಮ ಬೆಲೆ ನಿರೀಕ್ಷೆಯಲ್ಲಿ ಬೆಳೆ ಮಾಡಿದ್ದೇವೆ.
–ಸತೀಶ್ ಕಾರ್ಗಲ್ ಶುಂಠಿ ಬೆಳೆಗಾರ

ಕಳೆದ ಬಾರಿ ಕೈಸುಟ್ಟ ಶುಂಠಿ

2023-24 ನೇ ಸಾಲಿನಲ್ಲಿ ಗರಿಷ್ಠ ಹಂತ ತಲುಪಿದ್ದ ಹಸಿ ಶುಂಠಿಯ ಬೆಲೆಯು 60 ಕೆಜಿ ಮೂಟೆಗೆ ₹5 ಸಾವಿರ ದಾಟಿತ್ತು. ಇದನ್ನು ಗಮನಿಸಿದ ರೈತರಷ್ಟೇ ಅಲ್ಲದೇ ಅನೇಕ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶುಂಠಿ ಬೆಳೆಯಲು ಪ್ರಾರಂಭಿಸಿದರು. 2024-25ನೇ ಸಾಲಿನಲ್ಲಿ ಪ್ರತಿ 60 ಕೆಜಿ ಮೂಟೆಯ ಹಸಿ ಶುಂಠಿ ಬೆಲೆ ₹1ಸಾವಿರಕ್ಕೆ ಕುಸಿದಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಯಿತು. ಕಳೆದ ವರ್ಷ ಕೈ ಸುಟ್ಟುಕೊಂಡ ಕೆಲವರು ಶುಂಠಿ ಸಹವಾಸ ಸಾಕು ಎಂದು ಕೈಬಿಟ್ಟರೂ ಶುಂಠಿ ಕೃಷಿಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕಡಿಮೆಯಾಗಿಲ್ಲ.

ಪರವಾನಗಿ ನವೀಕರಣ ಮಾಡಿಸಿಕೊಳ್ಳಿ

ಬೆಳೆಗಾರರು ಹೊಗೆಸೊಪ್ಪು ಸಸಿ ನಾಟಿ ಮಾಡುವಾಗ ರೋಗ ಮುಕ್ತವಾದ ಆರೋಗ್ಯಕರ ಸಸಿಗಳನ್ನು ನಾಟಿ ಮಾಡಲು ಆದ್ಯತೆ ನೀಡಬೇಕು ಎಂದು ರಾಮನಾಥಪುರ ತಂಬಾಕು ಮಾರುಕಟ್ಟೆ ಅಧೀಕ್ಷಕಿ ಸವಿತಾ ಸಲಹೆ ನೀಡಿದ್ದಾರೆ. ರಸಗೊಬ್ಬರವನ್ನು ಸಸಿಗಳ ಪಕ್ಕದಲ್ಲಿ ಗುಳಿ ಹೊಡೆದು ಹಾಕಬೇಕು. ಹೊಗೆಸೊಪ್ಪು ಬೆಳೆಗಾರರ ಪರವಾನಗಿ ನವೀಕರಣ ಮಾಡುತ್ತಿದ್ದು ಬೆಳೆಗಾರರು ಶೀಘ್ರದಲ್ಲಿ ನವೀಕರಣ ಮಾಡಿಸಿಕೊಂಡಲ್ಲಿ ದಂಡ ಶುಲ್ಕ ತಪ್ಪಿಸಿಕೊಳ್ಳಬಹುದು. ರಸಗೊಬ್ಬರ ಪಡೆಯಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.