ಮಂಗಳವಾರ, ಸೆಪ್ಟೆಂಬರ್ 21, 2021
29 °C

ಹಾಸನ: ನೆಲದಲ್ಲೇ ಮಲಗಿರುವ ಕೊರೊನಾ ಸೋಂಕಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಹಿಮತ್‌ ಸಿಂಗ್‌ ಬಟ್ಟೆ ಕಾರ್ಖಾನೆಯ ಕೊರೊನಾ ಸೋಂಕಿತ ಕಾರ್ಮಿಕರನ್ನು ಹಾಸಿಗೆ ಕೊರತೆಯಿಂದ ನೆಲದ ಮೇಲೆ ಮಲಗಿಸಲಾಗಿದೆ.

ಎರಡು ದಿನಗಳಿಂದ ಕಾರ್ಖಾನೆಯ 135ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸೋಂಕು ತಗುಲಿದೆ. ಕಂಪನಿ ಹಾಸ್ಟೆಲ್‌ನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಜಿಲ್ಲಾಡಳಿತ ಸೂಚಿಸಿತ್ತು. ಕೆಲವರನ್ನು ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸಿಗೆ ಕೊರತೆಯಿಂದ 30ಕ್ಕೂ ಹೆಚ್ಚು ಸೋಂಕಿತರು ಕಂಪನಿ ಆವರಣದ ಸಿಬ್ಬಂದಿ ರೂಮ್‌ನಲ್ಲಿ ಬೆಡ್‌ಶಿಟ್‌,ರಟ್ಟಿನ ಶಿಟ್‌ ಹಾಸಿಕೊಂಡು ನೆಲದ ಮೇಲೆ ಮಲಗಿದ್ದಾರೆ.

‘ವಿಷಯ ತಿಳಿದ ಬಳಿಕ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎಲ್ಲ ಸೋಂಕಿತರನ್ನು ಕೃಷಿ ಮಹಾವಿದ್ಯಾಲಯದ ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು