ಸಕಲೇಶಪುರ: ತಾಲ್ಲೂಕಿನ ಮಠಸಾಗರ ಸಮೀಪ ಗುಂಪಿನಿಂದ ಬೇರ್ಪಟ್ಟು ನಿತ್ರಾಣಗೊಂಡ ಕಾಡಾನೆ ಮೃತಪಟ್ಟಿದೆ.
21 ಕಾಡಾನೆಗಳ ಗುಂಪಿನಲ್ಲಿದ್ದ 'ಕಾಂತಿ' ಎಂಬ ಹೆಸರಿನ ಆನೆ ಹಿಂಡಿನಿಂದ ಬೇರ್ಪಟ್ಟಿತ್ತು. ಐಬಿಸಿ ಕಾಫಿ ಎಸ್ಟೇಟ್‌ನಲ್ಲಿರುವ ನೀರಿನ ಹಳ್ಳದ ಬಳಿ ನೀರು ಕುಡಿಯಲು ಬಂದಾಗ, ನಿತ್ರಾಣಗೊಂಡು ಮಲಗಿತ್ತು.
ಇಟಿಎಫ್ ಮತ್ತು ಆರ್‌ಆರ್‌ಟಿ ಸಿಬ್ಬಂದಿ ಇದನ್ನು ಗಮನಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗೆ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.
ಇತ್ತೀಚೆಗಷ್ಟೇ ಮರಿ ಆನೆಗೆ ಜನ್ಮ ನೀಡಿದ್ದ ಕಾಂತಿ, 21 ಕಾಡಾನೆಗಳ ಗುಂಪಿನ ನೇತೃತ್ವ ವಹಿಸಿತ್ತು. ಸಕಲೇಶಪುರ, ಆಲೂರು ಭಾಗದಲ್ಲಿ ಸಂಚಾರ ನಡೆಸುತ್ತಿತ್ತು. ಕಾಡಾನೆಗಳ ಗುಂಪಿನ ಚಲನವಲನ ಗಮನಿಸಲು ಅರಣ್ಯ ಇಲಾಖೆಯಿಂದ ಈಚೆಗೆ ಕಾಂತಿಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.