ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ನೆಲಬಳ್ಳಿ ಗ್ರಾಮದಲ್ಲಿ ಸಾಲದ ಹೊರೆ ತಾಳಲಾರದೆ ರೈತರೊಬ್ಬರು ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ತಿಮ್ಮೇಗೌಡ (60) ಮೃತ ರೈತ. ನಾಲ್ಕು ಎಕರೆ ಜಮೀನಿನಲ್ಲಿ ಶುಂಠಿ, ಜೋಳ, ಕಾಫಿ, ಮೆಣಸು ಮಿಶ್ರ ಬೆಳೆ ಬೆಳೆದಿದ್ದರು. ಮಲ್ಲಿಪಟ್ಟಣ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ₹1 ಲಕ್ಷ ಸಾಲ ಪಡೆದಿದ್ದರು. ಆಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇಟ್ಟು ₹4 ಲಕ್ಷ ಹಾಗೂ ₹1.50ಲಕ್ಷ ಕೈ ಸಾಲ ಮಾಡಿದ್ದರು.

ಅತಿಯಾದ ಮಳೆಯಿಂದ ಎಲ್ಲ ಬೆಳೆಗಳು ಹಾನಿಯಾಗಿದ್ದು, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಪಟ್ಟಣದ ಆಸ್ಪತ್ರೆಗೆ ತಂದಿದ್ದ ವೇಳೆ ತಹಶೀಲ್ದಾರ್ ಕೆ.ಸಿ. ಸೌಮ್ಯ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಶೀಘ್ರವಾಗಿ ಕೊಡಿಸುವುದಾಗಿ ಹೇಳಿದರು.

ಕೃಷಿ ಅಧಿಕಾರಿ ಕವಿತಾ, ಗ್ರೇಡ್- 2 ತಹಶೀಲ್ದಾರ್ ಸಿ. ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.