ಹಾಸನ: ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ವೇಳೆ ಸಾಣೇಹಳ್ಳಿ ಸ್ವಾಮೀಜಿ, ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಾರ್ಜುವಳ್ಳಿ ಮಠದ ಮಠಾಧೀಶ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೀರಶೈವ -ಲಿಂಗಾಯತ ಧರ್ಮದಲ್ಲಿ ಶತಮಾನಗಳಿಂದ ಹಲವಾರು ಮಠಗಳ ಏಳ್ಗೆಗೆ ಜಂಗಮ ಸ್ವಾಮಿಗಳ ಕೊಡುಗೆ ಹೆಚ್ಚಿದೆ. ಸಿದ್ದಾಂತ ಶಿಖಾಮಣಿಯ ತತ್ವಗಳೊಂದಿಗೆ ರೇಣುಕ ಲೀಲೆ, ಬಸವಾದಿ ಶಿವಶರಣರ ಪ್ರಸಾರ, ವಚನಗಳು, ಶರಣ ಲೀಲಾಮೃತ, ಪುರಾಣ ಪ್ರವಚನಗಳ ಮೂಲಕ ಭಕ್ತ ಸಮುದಾಯದಲ್ಲಿ ಸಂಸ್ಕಾರಯುತ ಸದೃಢ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದು ವಿವರಿಸಿದರು.

ಶತಮಾನಗಳಿಂದಲೂ ಎಲ್ಲ ಭಕ್ತರು– ಜಂಗಮರ ಸಂಬಂಧ ಅವಿನಾಭಾವವಾಗಿದೆ. ಜನರು ಜಂಗಮರನ್ನು ಸಾಕ್ಷಾತ್ ಪರಶಿವನೇ ಮನೆಗೆ ಬಂದ ಎಂಬ ಭಾವದಿಂದ ಪಾದಗಳನ್ನು ಪೂಜಿಸಿ, ಫಲ-ತಾಂಬೂಲ-ದಕ್ಷಿಣೆ, ಧಾನ್ಯಗಳನ್ನು ಸಮರ್ಪಿಸುವ ಪರಂಪರೆ, ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ ಎಂದರು.

ಜಿಲ್ಲಾ ಜಂಗಮ ಸಮಾಜದ ಮುಖಂಡ ದೇವರಾಜು ಮಾತನಾಡಿ, ಜಗಜ್ಯೋತಿ ಬಸವಣ್ಣನವರು ಜಂಗಮರ ಕುರಿತು ಅನೇಕ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ, ಜಂಗಮ ಬಂದರೆ ನಡೆ ನಡೆ ಎಂದು ಹೇಳಿದರು. ವೀರಶೈವ-ಲಿಂಗಾಯತ ಧರ್ಮದ ಅಷ್ಟಾವರಣಗಳಲ್ಲಿ ಗುರು-ಲಿಂಗ- ಜಂಗಮ- ವಿಭೂತಿ-ಪಾದೋದಕ-ಪ್ರಸಾದಗಳು ಪವಿತ್ರವಾದ ಸಂಸ್ಕಾರಗಳಾಗಿವೆ. ಇಂತಹ ಪಾವನ ಸಂಸ್ಕೃತಿ, ಪರಂಪರೆಯ ವಿರುದ್ಧ ತಾತ್ಸಾರವಾಗಿ ಹೇಳಿಕೆ ನೀಡುವುದು ಅವಿವೇಕಿತನ ಎಂದರು.

ಶಿಶುವಿನಿಂದ ಅಂತ್ಯಕ್ರಿಯೆಯವರೆಗೂ ಜಂಗಮ ಸ್ವಾಮಿಗಳು ಜಾತಿ, ಕುಲ, ಲಿಂಗ ಭೇದವಿಲ್ಲದೆ ಧಾರ್ಮಿಕ ಸಂಸ್ಕಾರಗಳನ್ನು ನೆರವೇರಿಸುತ್ತ ಬಂದಿದ್ದಾರೆ. ಅವರ ಪಾದ ಶವದ ಮೇಲೆ ಇಟ್ಟು ಆಶೀರ್ವಾದ ನೀಡುವುದರಿಂದ ಆ ಶವ ಶಿವನಾಗುತ್ತದೆ ಎಂಬ ಭಕ್ತಿ ಪರಂಪರೆಯ ನಂಬಿಕೆ ಇಂದಿಗೂ ಇದೆ. ಇಂತಹ ಮಹತ್ವದ ಸೇವೆಯನ್ನು ನಿರ್ವಹಿಸುತ್ತಿರುವ ಜಂಗಮ ಸ್ವಾಮಿಗಳನ್ನು ವಿವೇಕವಿಲ್ಲದವರಂತೆ ಬಿಂಬಿಸುವುದು ಸರಿಯಲ್ಲ ಎಂದರು.

ಜಂಗಮ ಸ್ವಾಮಿಗಳು ಕೇವಲ ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ಅವರು ಸಮಸ್ತ ಸಮಾಜದ ಹಿತ ಬಯಸುವವರು. ಆದರೂ ಅವರನ್ನು ಜಾತಿ ಆಧಾರದಲ್ಲಿ ಕೀಳಾಗಿ ಹೇಳಿರುವ ಸಾಣೇಹಳ್ಳಿ ಶ್ರೀಗಳ ವಿಕೃತ ಮನಸ್ಥಿತಿ ತೋರಿಸುತ್ತದೆ. ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ನುಗ್ಗೇಹಳ್ಳಿಯ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೋಮಶೇಖರಯ್ಯ, ಧರಣಿ ಕುಮಾರ್, ರೇಣುಕಾರಾಧ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.