ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳೆನರಸೀಪುರ | ಸಂತ್ರಸ್ತರಿಗೆ ₹1.10 ಕೋಟಿ ವಿಮೆ ಪರಿಹಾರ

ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣ ಇತ್ಯರ್ಥ
Published 17 ಮಾರ್ಚ್ 2024, 14:23 IST
Last Updated 17 ಮಾರ್ಚ್ 2024, 14:23 IST
ಅಕ್ಷರ ಗಾತ್ರ

ಹೊಳೆನರಸೀಪುರ: ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯ ಮಂಡಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿಮಾ ಕಂಪನಿ ₹1.10 ಕೋಟಿ ಪರಿಹಾರ ಒದಗಿಸಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಅಮರ್‌ ವಿ.ಎಲ್‌. ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಅನ್ವಯ ಶನಿವಾರ ಜರುಗಿದ ಲೋಕ ಅದಾಲತ್ ನಂತರ ಅವರು ಮಾಹಿತಿ ನೀಡಿದರು.

ಚಂದ್ರೇಗೌಡ ಎಂಬ ವ್ಯಕ್ತಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು, ಪ್ರಕರಣ ಸಂಬಂಧ ಸಂತ್ರಸ್ತರ ಪರ ವಕೀಲರು ಹಾಗೂ ವಿಮಾ ಕಂಪನಿಯ ವಕೀಲರು ಮತ್ತು ವಕೀಲ ಸಂಘದ ಸದಸ್ಯರ ಸಮ್ಮಖದಲ್ಲಿ ಚರ್ಚೆ ಮಾಡಲಾಯಿತು ವಿಮಾ ಕಂಪನಿಯವರು ₹1.10 ಕೋಟಿ ಪರಿಹಾರ ರೂಪದಲ್ಲಿ ಅರ್ಜಿದಾರರಿಗೆ ಕೊಟ್ಟಿದ್ದಾರೆ. ಈ ರೀತಿಯ ಪ್ರಕರಣಗಳು ಹೆಚ್ಚು ಇತ್ಯರ್ಥ ಆಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥ ಪಡಿಸುವಲ್ಲಿ ವಕೀಲರ ಸಹಕಾರ ಪ್ರಮುಖವಾಗಿದ್ದು, ಅವರ ಸಹಕಾರವನ್ನು ಅಭಿನಂದಿಸುತ್ತೇವೆ ಎಂದರು.

ಜಿ.ಸೋಮನಹಳ್ಳಿ ಗ್ರಾಮದ ಮಂಜೇಗೌಡ ಹಾಗೂ ಭಾಗ್ಯಮ್ಮ ಮಾತನಾಡಿ, ‘ದ್ವಿಚಕ್ರ ವಾಹನದ ಅಪಘಾತದಲ್ಲಿ ತಮ್ಮ ಮಗ ಚಂದ್ರೇಗೌಡ ಮೃತಪಟ್ಟಿದ್ದು, ಘಟನೆ ಸಂಬಂಧ ನ್ಯಾಯಾಲಯದಲ್ಲಿ ಉಲಿವಾಲ ಸತೀಶ್ ನಮ್ಮ ಪರ ವಕಾಲತ್ತು ವಹಿಸಿದ್ದರು. ಇದರ ಸಂಬಂಧ ನ್ಯಾಯಾಧೀಶರು, ವಕೀಲರು, ವಿಮಾ ಕಂಪನಿಯ ವಕೀಲ ಚಿದಾನಂದ ಯು.ಎಂ. ಅವರ ಜತೆಗೆ ಮಾತನಾಡಿ ಪರಿಹಾರ ಕೊಡಿಸಿದ್ದಾರೆ. ನ್ಯಾಯಾಧೀಶರು ಹಾಗೂ ವಕೀಲರೆಲ್ಲರಿಗೂ ನಮಸ್ಕರಿಸುತ್ತೇವೆ’ ಎಂದರು.

ಹಿರಿಯ ಸವಿಲ್ ನ್ಯಾಯಾಧೀಶ ವಿ.ಎಲ್. ಅಮರ್, ಸಿವಿಲ್ ನ್ಯಾಯಾಧೀಶ ಪ್ರವೀಣ್ ಆರ್‌.ಜೆ.ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿದ್ದರಾಮ ಅವರ ಉಪಸ್ಥಿತಿಯಲ್ಲಿ ಜರುಗಿದ ಲೋಕ ಅದಾಲತ್‍ನಲ್ಲಿ ತೆಗೆದುಕೊಂಡ 1249 ಪ್ರಕರಣಗಳಲ್ಲಿ 989 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ₹ 28.58 ಲಕ್ಷ ಮೊತ್ತದ ಪರಿಹಾರ ಇತ್ಯರ್ಥವಾಗಿದೆ.

ಕ್ರಿಮಿನಲ್ ಸಂಯುಕ್ತ ಅಪರಾಧಗಳಲ್ಲಿ 15 ರಲ್ಲಿ 6, ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 138 ರ ಅಡಿಯ 56ರಲ್ಲಿ 6, ಹಣ ವಸೂಲಾತಿ ಸೂಟ್‍ಗಳ ಪೈಕಿ 10 ರಲ್ಲಿ 4, ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯ ಮಂಡಳಿಯ 23 ಪ್ರಕರಣಗಳಲ್ಲಿ 8, ವಿಭಜನೆ ಸೂಟ್ಸ್‌ನಡಿ 26 ರಲ್ಲಿ 4, ನಿರ್ದಿಷ್ಟ ಕಾರ್ಯಕ್ಷಮತೆ ಸೂಟ್‌ನ 6 ರಲ್ಲಿ 1, ಎಲ್‍ಎಸಿ ಎಕ್ಸಿಕ್ಯೂಷನ್ 11 ಪ್ರಕರಣ ಪೈಕಿ 4, ಎಂವಿಸಿ ಎಕ್ಸಿಕ್ಯೂಷನ್‌ನ 2 ಪ್ರಕರಣಗಳ ಪೈಕಿ 1 ಪ್ರಕರಣ ಇತ್ಯರ್ಥವಾಗಿವೆ.

ಇತರೆ ಎಕ್ಸಿಕ್ಯೂಷನ್‌ನ 121 ಪ್ರಕರಣಗಳಲ್ಲಿ 76, ಇತರೆ 35 ಸಿವಿಲ್ ದಾವೆಗಳ ಪೈಕಿ 4, ಹೆಂಡತಿ, ಮಕ್ಕಳು ಮತ್ತು ಪೋಷಕರ ನಿರ್ವಹಣೆಯ 10 ಪ್ರಕರಣಗಳಲ್ಲಿ 1, ಸಣ್ಣ ಪುಟ್ಟ 930 ಪ್ರಕರಣಗಳ ಪೈಕಿ 873 ಇತ್ಯರ್ಥವಾಗಿವೆ. 3 ಇತರೆ ಕ್ರಮಿನಲ್ ಪ್ರಕರಣಗಳ ಪೈಕಿ 1 ಇತ್ಯರ್ಥಗೊಂಡಿದೆ.

ಸರ್ಕಾರಿ ಅಭಿಯೋಜಕ ಸುನೀಲ್‍ರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ವಕೀಲರಾದ ರವೀಶ್ ಆರ್.ಡಿ., ಪುರುಷೋತಮ್ ಬಿ.ಆರ್., ರಾಮಪ್ರಸನ್ನ, ಉದಯರಂಜನ್, ಅರುಣ್ ಕುಮಾರ್, ಶಿವಮೂರ್ತಿ, ಸವಿತಾ, ಸತೀಶ್, ಜಯಪ್ರಕಾಶ್, ಕೆ.ಆರ್.ಸುನಿಲ್ ಕುಮಾರ್, ಶಶಿಕುಮಾರ್ ಎಚ್.ಕೆ., ಸುನೀಲ್ ಎಚ್.ಎನ್., ನವೀನ್, ಶೇಖರಪ್ಪ ಕೆ.ಎಸ್., ಆನಂದೇಶ್ವರ, ಚಂದ್ರಶೇಖರ್ ಕೆ.ಜೆ., ಶಿವಣ್ಣ ಆರ್., ಶಿವಣ್ಣ ಎಚ್., ಸುರೇಶ್ ಐ.ಎಲ್., ಕೆ.ಕೆ.ಶೈಲಜಾ, ಕೃಷ್ಣಮೂರ್ತಿ, ಕೃಷ್ಣೇಗೌಡ, ಸತೀಶ್, ಆಶಾ, ಲಾವಣ್ಯ, ಸವಿತಾ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT