ಮಂಗಳವಾರ, ಮೇ 18, 2021
28 °C

ಲಾಕ್‌ಡೌನ್ | ಕರ್ನಾಟಕದಲ್ಲಿ ಮಹಾರಾಷ್ಟ್ರ ಕಾರ್ಮಿಕನ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ಒನ್‌ ಟೈಮ್‌ ಎಟಿಎಂಗಳನ್ನು ಸ್ಥಾಪಿಸಲೆಂದು ಮಹಾರಾಷ್ಟ್ರದಿಂದ ಬಂದಿದ್ದ ಜೈಶ್‌ ಠಾಕೂರ್‌, ಲಾಕ್‌ಡೌನ್‌ ಘೋಷಣೆಯಿಂದಾಗಿ ಶ್ರವಣಬೆಳಗೊಳ ದಲ್ಲಿಯೇ ಉಳಿದಿದ್ದು, ಊಟ, ವಸತಿಗೆ ಪರದಾಡುತ್ತಿದ್ದಾರೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವತ್ಸಾಯ್‌ ಗಾಂವ್‌ನ 42 ವರ್ಷದ ಜೈಶ್‌ ಠಾಕೂರ್‌ ಮುಂಬೈನ ಬೋರಾ ಪ್ಲಾಸ್ಟ್‌ ಕಂಪನಿ ಎಟಿಎಂಗಳ ನಿರ್ವಹಣೆಯ ಜೋಡಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್‌ 3ರಂದು ಹಾಸನ ನಗರಕ್ಕೆ ಬಂದಿದ್ದು, ಜಿಲ್ಲೆಯ ವಿವಿಧೆಡೆ ಎಟಿಎಂಗಳನ್ನು ಸ್ಥಾಪಿಸಿದ್ದಾರೆ. ಮಾರ್ಚ್‌ 22ರಂದು ಶ್ರವಣಬೆಳಗೊಳದ ಬಸ್‌ ನಿಲ್ದಾಣ ಮುಂಭಾಗದಲ್ಲಿ ಎಟಿಎಂ ಸ್ಥಾಪಿಸಿದ್ದರು.

‘ನನ್ನ ಮೊಬೈಲ್‌ ಸಹ ಕಳವಾಗಿದ್ದು, ದಿಕ್ಕು ತೋಚದಂತಾಗಿದೆ. ಬಯಲೇ ಮನೆಯಾಗಿದ್ದು, ಊಟಕ್ಕೂ ತೊಂದರೆಯಾಗಿದೆ’ ಎಂದು ಠಾಕೂರ್‌ ಅಳಲು ತೋಡಿಕೊಂಡರು.

ಪಟ್ಟಣದ ಬಸ್‌ ನಿಲ್ದಾಣ ದಲ್ಲಿರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಹಾರದ ಜೈಕುಮಾರ ಚೌಧರಿ ಅವರು ಠಾಕೂರ್‌ ಅವರಿಗೆ ಆಶ್ರಯ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು