ಶುಕ್ರವಾರ ಚಂದ್ರಶೇಖರ ನಾಪತ್ತೆಯಾಗಿದ್ದರು. ಕೆರೆ ತೀರದಲ್ಲಿ ಅವರ ಪಾದರಕ್ಷೆ ಪತ್ತೆಯಾಗಿದ್ದವು. ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಕೆರೆಯಲ್ಲಿ ಶುಕ್ರವಾರ ಶೋಧ ಕಾರ್ಯ ನಡೆದಿತ್ತು. ಆದರೆ ಮೃತ ದೇಹ ದೊರಕಲಿಲ್ಲ. ಶನಿವಾರ ಮೃತದೇಹ ಕೆರೆ ನೀರಿನಲ್ಲಿ ತೇಲುತ್ತಿದ್ದರಿಂದ ಚಂದ್ರಶೇಖರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ.