ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಮನೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದು ಬೇಸರವಾಗಿದೆ: ಪ್ರೀತಂ ಗೌಡ

ಸಂಪುಟದಲ್ಲಿ ಹಳೇ ಮೈಸೂರು ಕಡೆಗಣನೆಗೆ ತೀವ್ರ ಅಸಮಾಧಾನ
Last Updated 7 ಆಗಸ್ಟ್ 2021, 14:58 IST
ಅಕ್ಷರ ಗಾತ್ರ

ಹಾಸನ: ‘ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಕೂಡಲೇ ಸುತ್ತೂರು, ಸಿರಿಗೆರೆ, ಸಿದ್ದಗಂಗಾ ಅಥವಾ ಆದಿಚುಂಚನಗಿರಿ ಮಠಕ್ಕೋ ಭೇಟಿ ನೀಡುತ್ತಾರೆ ಅಂತ ಭಾವಿಸಿದ್ದೇವು.ಆದರೆ, ಅವರ ತಂದೆ ಸರ್ಕಾರ ಬೀಳಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಗೆಹೋಗಿದ್ದು ಕಾರ್ಯಕರ್ತರ ಮನಸ್ಸಿಗೆ ನೋವು ಉಂಟು ಮಾಡಿದೆ’ ಎಂದು ಶಾಸಕ ಪ್ರೀತಂಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇವೇಗೌಡರು ಹಿರಿಯರಲ್ಲವೇ, ಅದಕ್ಕಾಗಿ ಹೋಗಿರಬಹುದು ಎಂದು ನಾನು ಸಮಾಧಾನಮಾಡಿದ್ದೇನೆ. ಆದರೆ, ಸಂಪುಟ ವಿಸ್ತರಣೆ ಆಗದೆಯೇ ಅವರ ಮನೆಗೆ ಹೋಗೋದು ಬೇಕಿರಲಿಲ್ಲಎಂಬುದು ಕಾರ್ಯಕರ್ತರಷ್ಟೇ ಅವರ ಅಭಿಮಾನಿಗಳಿಗೂ ಬೇಸರವಾಗಿದೆ ಎಂದರು.

ದಿನ ಬೆಳಿಗ್ಗೆ ಎದ್ದು ಜೆಡಿಎಸ್ ನಾಯಕರ ವಿರುದ್ಧ ರಾಜಕೀಯವಾಗಿ ಗುದ್ದಾಡೋದು ಕಾರ್ಯಕರ್ತರು. ಅವರ ನೋವನ್ನು ಅರ್ಥಮಾಡಿಕೊಳ್ಳದೆ ಇವರು ರಾಜಕೀಯ ಮಾಡೋದುಎಷ್ಟರ ಮಟ್ಟಿಗೆ ಸರಿ ಎಂದು ಖಾರವಾಗಿ ಪ್ರಶ್ನಿಸಿದರು.

‘ನನ್ನ ಮನೆಗೆ ನುಗ್ಗಿ ಕಲ್ಲು ಹೊಡೆದವರ ಮನೆಗೆ ಕ್ಯಾಬಿನೆಟ್ ಆಗೋ ಮುನ್ನವೇ ಹೋದರೆನಮ್ಮಂಥ ಕಾರ್ಯಕರ್ತರನ್ನ ಯಾರು ಉಳಿಸಿಕೊಳ್ತಾರೆ’ ಎಂದು ಕಾರ್ಯಕರ್ತರುಕೇಳುತ್ತಿದ್ದಾರೆ. ಹಾಸನ ಸೇರಿ ನಾವು ಹಳೇ ಮೈಸೂರು ಭಾಗದಲ್ಲಿ ನಾವು ಜೆಡಿಎಸ್ ವಿರೋಧಿರಾಜಕಾರಣ ಮಾಡುತ್ತಿದ್ದೇವೆ. ಈ ಭಾಗಕ್ಕೆ ಮಂತ್ರಿ ಮಾಡೋದು ಬೇಡ, ಕನಿಷ್ಟ ಕಾರ್ಯಕರ್ತರಿಗೆಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಿ’ ಎಂದರು.

‘ಮುಖ್ಯಮಂತ್ರಿ ಸೇರಿದಂತೆ ನಾನು ಯಾರ ಬಳಿಯೂ ಹೋಗಿ ಮಂತ್ರಿ ಮಾಡಿ ಎಂದು ಕೇಳಿಲ್ಲ.ಆದರೆ ಒಕ್ಕಲಿಗರ ಪ್ರಾಬಲ್ಯ ಇರುವ ಹಳೇ ಮೈಸೂರು ಭಾಗದಲ್ಲಿ ಮೈಸೂರಿನ ನಾಗೇಂದ್ರ,ತುಮಕೂರಿನ ಮಸಾಲ ಜಯರಾಂ ಅಥವಾ ಹಾಸನದಿಂದ ನನ್ನನ್ನು ಮಂತ್ರಿ ಮಾಡಬಹುದುಎಂಬುದು ಕಾರ್ಯಕರ್ತರ ಆಸೆಯಾಗಿತ್ತು. ಆದರೆ ನೀಡಿಲ್ಲ ಎಂಬ ನೋವು ಅನೇಕರಲ್ಲಿ ಇದೆ’ ಎಂದು ಅಸಮಾಧಾನ ಹೊರ ಹಾಕಿದರು.

ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಿ.ಎಂ, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಸಂಘ ಪರಿವಾರದ ಜೊತೆಯೂ ಗಂಭೀರವಾಗಿ ಚರ್ಚೆ ಮಾಡುತ್ತೇನೆ ಎಂದ ಅವರು, ಮುಂದೆಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಇದೆ. ಚುನಾವಣೆಯನ್ನು ನಾವುಜೆಡಿಎಸ್ ವಿರುದ್ಧವೇ ಮಾಡಬೇಕು. ಅವರ ಜೊತೆ ಗುದ್ದಾಡಿ ಪಕ್ಷ ಕಟ್ಟಬೇಕು.ನಾನು ಕಾರ್ಯಕರ್ತರ ನೋವಿಗೆ ಸ್ಪಂದಿಸೋ ಕೆಲಸ ಮಾಡುವೆ. ಜೆಡಿಎಸ್ ಅವರೊಂದಿಗೆ ಹೊಂದಾಣಿಕೆ ಅಥವಾ ರಾಜಿ ರಾಜಕೀಯದ ಅವಶ್ಯಕತೆಬರಲ್ಲ. ಆದರೆ ಅವರು ಹೊಂದಾಣಿಕೆಗೆ ಕಾಯುತ್ತಿದ್ದಾರೆ. ಆದರೆ ಹಳೇ ಮೈಸೂರು ಭಾಗದಲ್ಲಿಅದು ನಡೆಯಲ್ಲ ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿ ಕಾರಿದರು.

ಜೆಡಿಎಸ್‌ ಜೊತೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು ಹೋಗಪ್ಪಾ ಅಂತಾ ನನಗೆ,ಕಾರ್ಯಕರ್ತರಿಗೆ ಸಿ.ಎಂ ಹೇಳಲಿ ಎಂದು ನೇರಾನೇರ ಕೇಳಿದ ಪ್ರೀತಂ, ಅವರು ಹೊಂದಾಣಿಕೆರಾಜಕಾರಣ ಮಾಡುತ್ತಿದ್ದರೆ ನಾನೆಲ್ಲಿ ರಾಜಕಾರಣ ಮಾಡೋಕ್ಕಾಗುತ್ತೆ? ಸಿ.ಎಂ ನಡೆಯಿಂದಜಿ.ಪಂ, ತಾ.ಪಂ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಾರ್ಯಕರ್ತರುಹೇಳುತ್ತಿದ್ದಾರೆ. ಇದನ್ನು ಸಿ.ಎಂ ಸರಿಮಾಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ನಾಯಕರು, ಇಡೀ ಜಿಲ್ಲೆಯಲ್ಲಿ ನಾನು ಹೇಳಿದ ಹಾಗೆ ನಡೆಯುತ್ತೆ ಎಂದುಹೇಳುತ್ತಿದ್ದಾರೆ. ಒಂದೇ ಒಂದು ನನ್ನ ವಿರುದ್ಧವಾದ ಕೆಲಸ ನಡೆದರೆ, ಅದಾದ ಮೇಲೆರಾಜಕಾರಣ ಹೇಗಿರುತ್ತೆ ಅನ್ನೋದನ್ನು ತೋರಿಸುವೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT