ಹಾಸನ: ‘ದೇಶದ ಒಟ್ಟು ಕಚ್ಚಾತೈಲದ ಆಮದಿನಲ್ಲಿ ಶೇ 60ರಷ್ಟು ಅದಾನಿ ಹಾಗೂ ಅಂಬಾನಿ ಕಂಪನಿಯೇ ನಿರ್ವಹಿಸುತ್ತಿದ್ದು, ಪರೋಕ್ಷವಾಗಿ ಸರ್ಕಾರವೇ ಅವರಿಗೆ ನೆರವು ನೀಡಿದಂತಾಗಿದೆ. ಈ ಬಗ್ಗೆ ಯಾರೊಬ್ಬರೂ ಏಕೆ ಮಾತನಾಡುತ್ತಿಲ್ಲ’ ಎಂದು ಕಾರ್ಮಿಕ ಸಂತೋಷ್ ಲಾಡ್ ಕೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಚ್ಚಾತೈಲ ಆಮದಿನಿಂದ ದೇಶಕ್ಕೆ ಕೋಟ್ಯಂತರ ರೂಪಾಯಿ ಸುಂಕದ ನಷ್ಟ ಉಂಟಾಗುತ್ತಿದೆ. ಇದರಲ್ಲಿ ಬಹು ಪಾಲು ಅಂಬಾನಿ, ಅದಾನಿ ಕಂಪನಿಗೆ ಲಾಭವಾಗುತ್ತಿದೆ’ ಎಂದರು.

‘ದೇಶದಲ್ಲಿ ಎಚ್ಬಿ1 ವೀಸಾ ಕುರಿತು ಹೆಚ್ಚು ಚರ್ಚೆಯಾಗಬೇಕು. ಆದರೆ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದರು.

‘ಕೇಂದ್ರ ಸರ್ಕಾರದಿಂದ ಜಿಎಸ್ಟಿ ದರ ಕಡಿತ ಮಾಡಿರುವುದರಿಂದ ಸ್ವದೇಶಿ ಉತ್ಪನ್ನಗಳಿಗೂ ಲಾಭವಾಗಲಿದೆ ಎನ್ನುತ್ತಾರೆ. ಆದರೆ ಪ್ರಧಾನಿ ಮೋದಿ ಯಾವ ಬ್ರಾಂಡ್ನ ಕನ್ನಡಕ ಹಾಕುತ್ತಾರೆ? ಯಾವ ಕಂಪನಿ ವಾಹನಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಜನ ಗಮನಿಸಬೇಕು. ಬಿಜೆಪಿ ಸಾಹುಕಾರ್ ಪಾರ್ಟಿ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ಪ್ರಧಾನಿ ತಮ್ಮಷ್ಟಕ್ಕೆ ತಾವು ವಿಶ್ವಗುರುವೆಂದು ಹೇಳಿಕೊಂಡರೆ ಸಾಕೇ? ವಿದೇಶಾಂಗ ನೀತಿಗಳು ಏನಾಗಿವೆ? ಅಕ್ಕಪಕ್ಕದ ದೇಶಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಬೇಕು. ಬಿಜೆಪಿ ಆಡಳಿತದಲ್ಲಿರುವ ಗುಜರಾತ್, ಬಿಹಾರ್ ಯಾವ ಸ್ಥಾನದಲ್ಲಿವೆ’ ಎಂದರು.

‘ರಾಜ್ಯ ಸರ್ಕಾರವು ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯನ್ನು ಕಲೆ ಹಾಕುತ್ತಿದ್ದು, ದೇಶದಲ್ಲಿಯೇ ಉತ್ತಮ ಸಮೀಕ್ಷೆ ಎಂದು ಸಾಬೀತಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.