ಸೋಮವಾರ, ಸೆಪ್ಟೆಂಬರ್ 27, 2021
26 °C

ಸಕಲೇಶಪುರ: ಕಟ್ಟಡ ಕಾಮಗಾರಿಗೆ ₹1.25 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಪುರಸಭೆಯ ಅಧ್ಯಕ್ಷ ಕಾಡಪ್ಪ ಅವರು ಮಂಗಳವಾರ 2021–22 ನೇ ಸಾಲಿಗೆ ₹1.53 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದರು.

ನಿರೀಕ್ಷಿತ ಆದಾಯ ₹28.6 ಕೋಟಿಯಾದರೆ, ₹27 ಕೋಟಿ ಖರ್ಚಾಗಿದೆ. ಆಸ್ತಿ ತೆರಿಗೆ ಮತ್ತು ಆಸ್ತಿ ತೆರಿಗೆ ದಂಡ ₹2.03 ಕೋಟಿ, ನೀರಿನ ಶುಲ್ಕ, ನೀರು ಸಂಪರ್ಕ ಮತ್ತು ಠೇವಣಿ ₹65.50 ಲಕ್ಷ, ಪುರಸಭೆ ಮಳಿಗೆಗಳಿಂದ ಬರುವ ಬಾಡಿಗೆ ₹1.20 ಕೋಟಿ, ಉದ್ದಿಮೆ ಪರವಾನಗಿ, ಇತರೆ ಪರವಾನಗಿ ಶುಲ್ಕ ಹಾಗೂ ದಂಡ ₹7.25 ಲಕ್ಷ ನಿರೀಕ್ಷಿಸಲಾಗಿದೆ.

‘ನಿವೇಶನ ಹಂಚಿಕೆಗಾಗಿ ಭೂಮಿ ಖರೀದಿಸಲು ₹1 ಕೋಟಿ, ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ₹1.25 ಕೋಟಿ, ಕಚೇರಿ ಉಪಕರಣಗಳಿಗೆ ₹30 ಲಕ್ಷ, ವಾಣಿಜ್ಯ ಮಳಿಗೆ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ₹75 ಲಕ್ಷ, ಸ್ವಾಗತ ಕಮಾನು, ಕಾಂಪೌಂಡ್, ರಸ್ತೆ ಬದಿ ಮಾರ್ಗಸೂಚಿ ಫಲಕಗಳ ಅಳವಡಿಕೆಗೆ ₹50 ಲಕ್ಷ ರೂಪಾಯಿ ಖರ್ಚು ಮಾಡಲಾಗುವುದು’ ಎಂದರು.

ಸದಸ್ಯರ ಆಕ್ಷೇಪ: ‘ಸ್ಮಶಾನಗಳ ಅಭಿವೃದ್ಧಿಗೆ ಒಂದು ಕಡೆ ₹40 ಲಕ್ಷ, ಮಾರುಕಟ್ಟೆ ಅಭಿವೃದ್ಧಿಗೆ ₹25 ಲಕ್ಷ, ಉದ್ಯಾನ ಅಭಿವೃದ್ಧಿಗೆ ₹40 ಲಕ್ಷ. ಮತ್ತೊಂದೆಡೆ ಸ್ಮಶಾನ, ಉದ್ಯಾನ, ಮಾರುಕಟ್ಟೆ ಅಭಿವೃದ್ಧಿಗೆ ₹75 ಲಕ್ಷ ತೋರಿಸಿರುವುದು ಹಾಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಹೊರಗುತ್ತಿಗೆ ₹85 ಲಕ್ಷ ರೂಪಾಯಿ ಖರ್ಚಿನ ಬಗ್ಗೆ ನಿಖರ ಮಾಹಿತಿ ನೀಡಬೇಕು’ ಎಂದು ಕೆಲ ಸದಸ್ಯರು ಆಕ್ಷೇಪ‍ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು