ಹೊಳೆನರಸೀಪುರ: ಬೆಳಿಗ್ಗೆಯಿಂದ ರಾತ್ರಿವರೆಗೆ ತಮ್ಮ ಅಂಗಡಿಯ ವ್ಯಾಪಾರದಲ್ಲಿ ತೊಡಗಿರುತ್ತಿದ್ದ ಆರ್ಯವೈಶ್ಯ ಸಮುದಾಯದವರು ಬುಧವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ವ್ಯಾಪಾರ, ವ್ಯವಹಾರದ ಜಂಜಾಟವನ್ನು ಬಿಟ್ಟು ವಾಸವಿ ಜಯಂತಿಯ ಸಂಭ್ರಮದಲ್ಲಿ ತಲ್ಲೀನರಾಗಿದ್ದರು.

ಪುರುಷರು ಬಿಳಿಪಂಚೆ ಹಾಗೂ ಬಿಳಿ ಅಂಗಿ ಧರಿಸಿ, ಮಹಿಳೆಯರು ಬಣ್ಣ ಬಣ್ಣದ ರೇಷ್ಮೆ ಸೀರೆ ತೊಟ್ಟು ಸಿಂಗಾರಗೊಂಡು ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಒಟ್ಟಾದರು. ಮಂಗಳವಾದ್ಯದ ಜೊತೆಯಲ್ಲಿ ಹೇಮಾವತಿ ನದಿಗೆ ತೆರಳಿದ ಮಹಿಳೆಯರು, ಕಳಸ ಹೊತ್ತು ಕನ್ನಿಕಾಪರಮೇಶ್ವರಿ ದೇವಾಲಯಕ್ಕೆ ತಂದರು.

ಬುಧವಾರ ವಾಸವಿ ಜಯಂತಿ ಅಂಗವಾಗಿ ಕನ್ನಿಕಾ ಪರಮೇಶ್ವರಿ ದೇವಿ ಸೇರಿದಂತೆ ಎಲ್ಲ ಪರಿವಾರ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿ, ವಿಶೇಷವಾಗಿ ಅಲಂಕರಿಸಿ, ಲೋಕ ಕಲ್ಯಾಣಾರ್ಥ ಲಲಿತಾ ಹೋಮ ನಡೆಸಿದರು. ನಂತರ ಮಹಾಮಂಗಳಾರತಿ ಮಾಡಿ, ತೀರ್ಥ ಪ್ರಸಾದ ನೀಡಿದರು.

ಕನ್ನಿಕಾ ಪರಮೇಶ್ವರಿ ಅಮ್ಮನ ಉತ್ಸವ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲು ಎಲ್ಲರಿಗೂ ಅವಕಾಶ ಮಾಡಿಕೊಡಲಾಗಿತ್ತು. ಮಹಿಳೆಯರು ಮಡಿಲಕ್ಕಿ ಕಟ್ಟಿದರು. ದೇವಾಲಯದ ಮುಂಭಾಗ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು. ಕಿಶೋರ್ ನೇತೃತ್ವದಲ್ಲಿ ವಾಸವಿ ಯುವಜನ ಸಂಘದವರು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು.

ಮಹಿಳಾ ಮಂಡಳಿಯಿಂದ ಸಹಸ್ರನಾಮ, ಯುವತಿಯರ ಸಂಘದಿಂದ ಆಟೋಟ ಸ್ಪರ್ಧೆ, ವಿದ್ಯಾ ಮತ್ತು ತಂಡದವರಿಂದ ನಾದನಮನ, ವಾಸವಿ ಕ್ಲಬ್ ವತಿಯಿಂದ ‘ಅಮ್ಮ ನಿನ್ನ ತೋಳಿನಲ್ಲಿ’ ತಾಯಿ ಮತ್ತು ಮಗುವಿನ ಬಾಂಧವ್ಯ ತಿಳಿಸುವ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಂಜೆಯಿಂದ ಆನೆ ಮೇಲೆ ಅಂಬಾರಿಯಲ್ಲಿ ಕನ್ನಿಕಾ ಪರಮೇಶ್ವರಿ ಉತ್ಸವ ಮೂರ್ತಿಯನ್ನು ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿದರು.

ಎಚ್.ಪಿ.ರಮೇಶ್, ಎಸ್.ಗೋಕುಲ್, ಮಂಜುನಾಥ್ ಗುಪ್ತಾ, ಮುರಳೀಧರ ಗುಪ್ತಾ, ಎ. ಮಂಜುನಾಥ್, ಉದಯಭಾನು, ಎನ್. ಗೌತಮ್, ಕೆ.ಎ.ವೆಂಕಟೇಶ್ಬಾಬು, ಎನ್.ಜಿ. ಮುಕುಂದ, ಟೈಗರ್ ಪ್ರಸನ್ನ, ಜಿ.ನಟರಾಜ್, ಎಚ್.ಎಸ್. ಸ್ಪಂದನ್, ಆಶ್ವೀಜ್, ವಾಸವಾಂಬ ಕೋ ಆಪರೇಟೀವ್ ಬ್ಯಾಂಕ್ ಸಿಇಒ ಎಸ್.ಆರ್. ಮೂರ್ತಿ, ಕಿಶೋರ್, ಕೆ.ಎಸ್.ಆರ್.ರಾಜು, ಎಸ್.ರೋಹಿತ್, ಎನ್.ಕಿರಣ್, ಎನ್.ಸುಭಾಷ್, ಹೇಮಾ ನಾಗೇಂದ್ರ, ದೀಪಾ ಬಾಲಾಜಿ, ಲಕ್ಷ್ಮೀ ಗುಪ್ತಾ, ಶ್ರೀನಿವಾಸ್, ಸ್ಪರ್ಶ ಸಂಜಯ್, ಸ್ವಾತೀ ಬಾಲಾಜಿ, ವಿದ್ಯಾ ವಿಜೇತ್ ನೇತೃತ್ವ ವಹಿಸಿದ್ದರು.

ನಿತ್ಯ ಒಂದೊಂದು ಅಲಂಕಾರ

ವಾಸವಿ ಜಯಂತಿಯ ಅಂಗವಾಗಿ ಮೇ 1 ರಿಂದ ವಾಸವಿ ಸಪ್ತಾಹ ಆಯೋಜಿಸಲಾಗಿತ್ತು. ದೇವಿಗೆ ಮೇ 1 ರಂದು ನೀಲಾಂಬರಿ ಅಲಂಕಾರ 2 ರಂದು ಬೆಣ್ಣೆ ಅಲಂಕಾರ 3 ರಂದು ಅನ್ನಪೂರ್ಣೇಶ್ವರಿ ಅಲಂಕಾರ 4 ರಂದು ವಿಭೂತಿ ಅಲಂಕಾರ 5 ರಂದು ಹತ್ತಾರು ಬಗೆಯ ಹೂವಿನ ಅಲಂಕಾರ 6 ರಂದು ಶ್ರೀಗಂಧದ ಅಲಂಕಾರ ಮಾಡಿ ಪೂಜಿಸಿದರು. ನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಆರ್ಯವೈಶ್ಯ ಸಮುದಾಯದವರು ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಯೋಜನೆ ಮಾಡಿದ್ದೆವು. ಎಲ್ಲರೂ ಒಟ್ಟಾಗಿ ಸಂಭ್ರಮಿಸಿದ್ದು ಸಂತಸ ತಂದಿದೆ.
-ಎ.ಆರ್. ರವಿಕುಮಾರ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.