ಹೊಳೆನರಸೀಪುರ: `ದೇಶ ಆಧುನಿಕತೆಗೆ ತೆರೆದುಕೊಂಡಿದ್ದರೂ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಮಹಿಳೆ ಅಬಲೆ ಎನ್ನುವ ರೀತಿಯಲ್ಲಿ ಇಂದಿಗೂ ಸಹ ನೋಡಲಾಗುತ್ತಿದೆ~ ಎಂದು ಹಾಸನ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತರ ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಡಾ. ಲೆಷ್ಟಿನೆಂಟ್ ಜಿ.ಡಿ. ನಾರಾಯಣ ನುಡಿದರು.

ಗುರುವಾರ ಇಲ್ಲಿನ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ನಡೆದ ಆಧುನಿಕ ಮಹಿಳೆಯ ಸಂದಿಗ್ಧತೆಗಳು ಎಂಬ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆ ಯರು ಉತ್ತಮ ಹಾಗೂ ಗೌರವದ ಜೀವನ ನಡೆಸ ಬೇಕೆಂದರೆ ಎಂತಹ ಸಮಸ್ಯೆಗಳನ್ನಾದರೂ ಧೈರ್ಯ ವಾಗಿ ಎದುರಿಸಬೇಕೆ ವಿನಃ ಹೆದರಿ ಆತ್ಮಹತ್ಯೆಯಂತಹ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಹೇಳಿದರು.

ಪ್ರೊ.ಚಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿನಿ ಯರು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಚೆನ್ನಾಗಿ ಅಧ್ಯಯನ ಮಾಡಬೇಕು. ಬೇರೆ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ನುಡಿದರು.

ಜಿ.ಪಂ. ಸದಸ್ಯೆ ಮಂಜುಳಾ ಬೈರಾಜು ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಉತ್ತಮವಾದ ಸಾಧನೆ ಮಾಡಿ ಎಂದು ಹಾರೈಸಿದರು.

ಉಪನ್ಯಾಸಕ ಶಿವರಾಮೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದಳು. ಶ್ರುತಿ ಸ್ವಾಗತಿಸಿ ವಿನುತಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.