ಶನಿವಾರ, ಮೇ 8, 2021
19 °C

ಕಲ್ಲುಕ್ವಾರಿ ಸ್ಪೋಟ; ಸಾಮಗ್ರಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ಎಲೆಕ್ಟ್ರಿಕಲ್‌ ಡೆಟೊನೇಟರ್‌ ಬಳಸಿ ಅನಧಿಕೃತವಾಗಿ ಕಲ್ಲುಕ್ವಾರಿಯಲ್ಲಿ ಸ್ಪೋಟಮಾಡಲು ಮುಂದಾಗಿದ್ದ ತಂಡವನ್ನು ತಾಲ್ಲೂಕಿನ ನೆಗವಣಿಗೆ ಗ್ರಾಮ ಸಮೀಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರದ ಪರವಾನಗಿ ಪಡೆಯದೇ ಕಲ್ಲು ಕ್ವಾರಿ ಸ್ಪೋಟಿಸುವ ಹುನ್ನಾರ ನಡೆಸಿದ್ದರು. ಪೊಲೀಸರು ದಾಳಿ ನಡೆಸಿ, ಎರಡು ಟ್ರ್ಯಾಕ್ಟರ್, ಎರಡು ಇತರೆ ವಾಹನಗಳು, ಸ್ಫೋಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ಶಿವಶಂಕರ ಗಣಾಚಾರಿ ಮತ್ತು ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.