ಉನ್ನತ ಶಿಕ್ಷಣಕ್ಕೆ ಅನುಕೂಲ
‘ಬಾಲ ಕಾರ್ಮಿಕ, ಅನಾಥ, ಭಿಕ್ಷಾಟನೆ ಜಾಲಕ್ಕೆ ಸಿಲುಕಿದ ಹಾಗೂ ಇತರೆ ಸಂದಿಗ್ಧ ಪರಿಸ್ಥಿತಿ ಎದುರಿಸುವ ಮಕ್ಕಳನ್ನು ರಕ್ಷಿಸಿ ಬಾಲ ಮಂದಿರಕ್ಕೆ ಸೇರಿಸಲಾಗುತ್ತದೆ. ಇಂಥ ಮಕ್ಕಳಿಗೆ ಸದ್ಯ ಬಾಲಮಂದಿರದ ಮೂಲಕ ವಿದ್ಯಾಭ್ಯಾಸ ಕೊಡಿಸಲಾಗುತ್ತಿದೆ. ಮಕ್ಕಳ ಉನ್ನತ ಶಿಕ್ಷಣದ ದೃಷ್ಟಿಯಿಂದ ಇದೀಗ ವಸತಿ ಶಾಲೆಗಳಿಗೆ ಸೇರಿಸಲು ತೀರ್ಮಾನಿಸಲಾಗಿದೆ’ ಎಂದು ನಿರ್ದೇಶನಾಲಯ
ಅಧಿಕಾರಿಯೊಬ್ಬರು ಹೇಳಿದರು.
‘ವಸತಿ ಶಾಲೆಗೆ ಸೇರಲು ಅರ್ಹರಿರುವ ಮಕ್ಕಳು ಬಾಲಮಂದಿರದಲ್ಲಿದ್ದಾರೆ. ಪ್ರವೇಶ ಪರೀಕ್ಷೆ ಇಲ್ಲದೇ ಅವರನ್ನು ವಸತಿ ಶಾಲೆಗೆ ಸೇರಿಸಲು ಅವಕಾಶವಿದೆ. ಜಿಲ್ಲಾವಾರು ಪಟ್ಟಿ ಸಿದ್ಧಪಡಿಸಿ, ಆಯಾ ಜಿಲ್ಲೆಯಲ್ಲಿರುವ ವಸತಿ ಶಾಲೆಯ 6ನೇ ತರಗತಿಗೆ ಮಕ್ಕಳನ್ನು ಸೇರಿಸಲಾಗುವುದು’ ಎಂದು ತಿಳಿಸಿದರು.