ಶಿಗ್ಗಾವಿ: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಫಲಿತಾಂಶ ಪಡೆಯುವ ಜತೆಗೆ ಕ್ರೀಡೆ, ಸಾಂಸ್ಕೃತಿ ಸೇರಿದಂತೆ ಪ್ರತಿ ಸ್ಪರ್ಧೆಯಲ್ಲಿ ಜಯ ಗಳಿಸುತ್ತಿದ್ದಾರೆ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರತಾಪ ನಾಯಕ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾರಾಯಣಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ಸಾಧನೆ ಮಾಡಿದ ಮಕ್ಕಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿ ಮಕ್ಕಳಿಗೆ ಮಾರ್ಗದರ್ಶನ ಅವಶ್ಯಕವಾಗಿದೆ. ನಂತರ ಎಲ್ಲ ಸೌಕರ್ಯಗಳನ್ನು ನೀಡುವುದು ಮುಖ್ಯವಾಗಿದೆ. ಗ್ರಾಮೀಣ ಮಕ್ಕಳು ಇಂದು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅವುಗಳನ್ನು ಗುರುತಿಸಿ ಸೂಕ್ತ ಪ್ರತಿಭೆಗಳಿಗೆ ಪ್ರೋತ್ಸಾಹ, ಬೆಂಬಲ ನೀಡಿದಾಗ ಪ್ರತಿಯೊಂದು ಸ್ಪರ್ಧೆಗಳಲ್ಲಿ ಗೆಲವು ಸಾಧಿಸಲು ಸಾಧ್ಯವಿದೆ’ ಎಂದರು.

ನಾರಾಯಣಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಶಿಕ್ಷಕರು, ಪಾಲಕರು ಮಕ್ಕಳ ಸಮಗ್ರ ಅಭಿವೃದ್ಧಿ, ಏಳ್ಗೆಗಾಗಿ ಕಂಕಣ ಬದ್ದರಾಗಿ ನಿಂತಿದ್ದಾರೆ. ಹೀಗಾಗಿ ಇಲ್ಲಿನ ಮಕ್ಕಳು ಸಾಧನೆಯ ಸಾಲಿನಲ್ಲಿ ನಿಲ್ಲಲು ಕಾರಣವಾಗಿದೆ. ಅದೇ ರೀತಿ ಪ್ರತಿ ಗ್ರಾಮದಲ್ಲಿನ ಪಾಲಕರು, ಶಿಕ್ಷಕರು ಮಕ್ಕಳಿಗೆ ಬೆನ್ನೆಲುಬಾಗಿ ನಿಂತು ದಾರಿ ತೋರುವ ಕೆಲಸ ಮಾಡಬೇಕು ಎಂದರು.

ಸನ್ಮಾನ: ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಶಂಭುಲಿಂಗ ಸಣ್ಣಬಸಪ್ಪನವರ (ವೆಟ್ ಲಿಫ್ಟಿಂಗ್ 65 ಕೆ.ಜಿ ಕುಸ್ತಿ), ಮಂಜಪ್ಪ ಮಡ್ಲಿ(60 ಕೆ.ಜಿ.ಕುಸ್ತಿ), ಅಶ್ವಿನಿ ತೊಂಡೂರ (ಚಕ್ರ ಎಸೆತ, 46 ಕೆಜಿ ವೆಟ್ ಲಿಫ್ಟಿಂಗ್ ), ಪ್ರೀತಿ ಆರೇರ್ (40 ಕೆಜಿ ವೆಟ್ ಲಿಫ್ಟಿಂಗ್) ಚೈತ್ರಾ ಮಲ್ಲಾಡದ (ಕೊಕ್ಕೊ) ವಿಶಾಲ ಮಲ್ಲಾಡದ( ಕೊ,ಕೊ), ಸೌಜನ್ಯ ನೇಕಾರ( ಕೊ,ಕೊ), ಸೌಜನ್ಯ ಹಿಂಡಿ( 40 ಕೆಜಿ ಕುಸ್ತಿ) ಅವರನ್ನು ಶಿಕ್ಷಕರು, ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.

ನಿವೃತ್ತ ಶಿಕ್ಷಕ ಎಸ್.ಎನ್.ಲಕ್ಷ್ಮೇಶ್ವರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುದ್ದಪ್ಪ ಗುಳೇದಕೇರಿ, ಪ್ರಾಚಾರ್ಯ ಚಾಯಿನ್ ಗುಲ್ಜಾರ್, ವಸಂತ ಶೇಟ್, ಸಂತೋಷ ಬಡಿಗೇರ, ಗಂಗಣ್ಣ ಬಾವಿನಕಟ್ಟಿ, ಬಸವರಾಜ ಮಡ್ಲಿ, ಪ್ರಕಾಶ ಆರೇರ್, ಸುಭಾಸ ಮಸಳಿ, ಮಹಾದೇವಪ್ಪ ಮಸಳಿ, ಕಲವೀರಪ್ಪ ಮಾಸನಕಟ್ಟಿ, ಶಂಕರಪ್ಪ ಕ್ಷೌರದ ಸೇರಿದಂತೆ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ಮಕ್ಕಳ ಪಾಲಕರು ಇದ್ದರು.