ಗುರುವಾರ , ಫೆಬ್ರವರಿ 25, 2021
19 °C
ವಿಜ್ಞಾನಿಗಳಿಂದ ವಿವಿಧ ಗೋಷ್ಠಿಗಳು

‘ಮೆಣಸಿನಕಾಯಿ ಬೆಳೆ’ ವಿಚಾರ ಸಂಕಿರಣ ಜ.29ರಂದು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ದೇವಿಹೊಸೂರು ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಜ.29ರಂದು ಒಂದು ದಿನದ ‘ರಾಜ್ಯ ಮಟ್ಟದ ಮೆಣಸಿನಕಾಯಿ ಬೆಳೆಯ ವಿಚಾರ ಸಂಕಿರಣ’ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಎಸ್. ಜಯರಾಮ್ (ಮಸಾಲ ಜಯರಾಮ್) ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಾಗಲಕೋಟೆ ತೋಟಗಾರಿಕಾ ವಿ.ವಿ. ಕುಲಪತಿ ಡಾ.ಕೆ.ಎಂ. ಇಂದಿರೇಶ್ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭಾಗವಹಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಮೆಣಸಿನಕಾಯಿಯ ವಿವಿಧ ತಳಿಗಳ ಮಾಹಿತಿ, ಉತ್ಪಾದನಾ ತಾಂತ್ರಿಕತೆಗಳು, ರೋಗ ಮತ್ತು ಕೀಟ ಹತೋಟಿ, ಕೊಯ್ಲೋತ್ತರ ತಂತ್ರಜ್ಞಾನಗಳು ಮತ್ತು ಮಾರುಕಟ್ಟೆ ಮಾಹಿತಿಗಳನ್ನು ಗೋಷ್ಠಿಗಳಲ್ಲಿ ವಿವಿಧ ವಿಜ್ಞಾನಿಗಳು ಮಂಡಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ರಾಜ್ಯದ ಮೆಣಸಿನಕಾಯಿ ಬೆಳೆಯುವ ಮತ್ತು ಬೆಳೆಯಲಿಚ್ಛಿಸಿರುವ ರೈತರು ಮತ್ತು ಮೆಣಸಿನಕಾಯಿ ವಾಪಾರಸ್ಥರು ದೇವಿಹೊಸೂರು ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಭೇಟಿ ನೀಡಿ ಮುಖ್ಯಸ್ಥರಲ್ಲಿ ನೋಂದಣಿ ಮಾಡಿಸಬಹುದು. ಮಾಹಿತಿಗೆ ದೂ: 80739 68654, 86186 93533 ಸಂಪರ್ಕಿಸಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು