ಬ್ಯಾಡಗಿ: ಪಟ್ಟಣದ ಕದರಮಂಡಲಗಿ ರಸ್ತೆಯ ಸೇಂಟ್ ಜಾನ್ ವಿಯಾನ್ನಿ ಚರ್ಚ್ ಹಾಗೂ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ಶಾಂತಿ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು.

ಫಾದರ್ ಫ್ರಾನ್ಸಿಸ್ ಡಿಸೋಜಾ ಮಾತನಾಡಿ, ‘ಸೇವೆಯ ಮೂಲಕ ಬದುಕಿನ ಸಾರ್ಥಕತೆ ಕಾಣುವ ಒಂದು ಅಪೂರ್ವ ಚಿಂತನೆಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ ಕೀರ್ತಿ ಏಸುಕ್ರಿಸ್ತನಿಗೆ ಸಲ್ಲುತ್ತದೆ. ಅವರ ಶಾಂತಿಯ ಸಂದೇಶ ಜಗತ್ತಿನಲ್ಲಿ ಪಸರಿಸಲಿ, ಚಿತ್ರ ಹಿಂಸೆಯನ್ನು ಸ್ವತಃ ಅನುಭವಿಸಿದ್ದರೂ ಏಸುಕ್ರಿಸ್ತ ತನ್ನನ್ನು ಶಿಲುಬೆಗೇರಿಸಿದ ಜನರಿಗಾಗಿ ಪ್ರಾರ್ಥಿಸಿದವರಲ್ಲಿ ಮೊದಲಿಗ ಆಗಿದ್ದಾರೆ’ ಎಂದರು.

ನಿರ್ಮಲಾ, ರೂಪಾ, ಅಚಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮೋಟೆಬೆನ್ನೂರು: ಇಲ್ಲಿಯ ಶಾಂತಿ ದೇವಾಲಯದಲ್ಲಿ ಏರ್ಪಡಿಸಿದ್ದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ರೇವರೆಂಡ್ ಅಶೋಕ ಬಂಡಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಶಾಂತಿ ಸಂದೇಶ ನೀಡಿದರು.

ಈ ವೇಳೆ ಜಾನ್ ಪುನೀತ, ಜೀವನಕುಮಾರ, ಪ್ರಭಾಕರ ಗುಡಗೂರ, ರತ್ನಾಕರ ಪುನೀತ, ಪ್ರಕಾಶ ಮಲೇಕಾರ, ನವರಾಜ ಶಿಗ್ಗಾವಿ, ಮಾಲಾ ಗುಡಗೂರ, ಚಂದ್ರಕಾಂತಿ ಪುನೀತ,
ಪ್ರೇಮಾ ಕಾಲ್ಪಲ್, ಪ್ರೇಮಾ ಗುಡಗೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.