ಹಾವೇರಿ:ಸರ್ಕಾರಿ ವೈದ್ಯ, ಆಶಾ ಕಾರ್ಯಕರ್ತೆ ಹಾಗೂ ಶಿಕ್ಷಣ ಇಲಾಖೆಯ ಇಬ್ಬರು ನೌಕರರು ಸೇರಿದಂತೆಭಾನುವಾರ ಒಟ್ಟು 146 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಇವು ಜಿಲ್ಲೆಯಲ್ಲಿ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ. 34 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1186 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 604 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 28 ಜನರು ಮೃತಪಟ್ಟಿದ್ದಾರೆ. 554 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ಸವಣೂರು-11, ಬ್ಯಾಡಗಿ-15, ಹಿರೇಕೆರೂರು-17, ಶಿಗ್ಗಾವಿ– 20, ಹಾವೇರಿ-27 ಹಾಗೂ ರಾಣೆಬೆನ್ನೂರ ತಾಲ್ಲೂಕಿನಲ್ಲಿ 56 ಪ್ರಕರಣಗಳು ಪತ್ತೆಯಾಗಿವೆ.

ಗುಣಮುಖರ ವಿವರ:ಸವಣೂರು ಹಾಗೂ ಹಿರೇಕೆರೂರು ತಾಲ್ಲೂಕಿನಲ್ಲಿ ತಲಾ 1, ಶಿಗ್ಗಾವಿ ಹಾಗೂ ರಾಣೆಬೆನ್ನೂರಿನಲ್ಲಿ ತಲಾ -3, ಹಾನಗಲ್-5, ಬ್ಯಾಡಗಿ-7 ಹಾಗೂ ಹಾವೇರಿ ತಾಲ್ಲೂಕಿನಲ್ಲಿ 14 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ‘ಕಂಟೈನ್‍ಮೆಂಟ್ ಜೋನ್’ ಹಾಗೂ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ. ಆಯಾ ತಹಶೀಲ್ದಾರ್‌ಗಳನ್ನು ‘ಇನ್ಸಿಡೆಂಟಲ್ ಕಮಾಂಡರ್’ ಆಗಿ ನೇಮಿಸಲಾಗಿದೆ.

ವ್ಯಕ್ತಿ ಸಾವು:ಹಾವೇರಿ ನಗರದ 58 ವರ್ಷದ ಪುರುಷ (ಪಿ-109380) ಜುಲೈ 31ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಉಸಿರಾಟದ ತೊಂದರೆಯಿಂದ ಜುಲೈ 27ರಂದು ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್ ಆ್ಯಂಟಿಜೆನ್ ಕಿಟ್‍ನಿಂದ ಮೂಗಿನ ದ್ರವದ ಪರೀಕ್ಷೆ ಮಾಡಲಾಗಿದ್ದು, ಸೋಂಕು ದೃಢಪಟ್ಟಿತ್ತು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.