ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು | ಸಾಲದ ಬಾಧೆ: ರೈತ ಆತ್ಮಹತ್ಯೆ

Published 29 ಮಾರ್ಚ್ 2024, 14:22 IST
Last Updated 29 ಮಾರ್ಚ್ 2024, 14:22 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಸಾಲದ ಬಾಧೆ ತಾಳಲಾರದೇ ರೈತ ಮನೆಯ ತೊಲಿಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 29 ರಂದು ಬೆಳಿಗ್ಗೆ ತಾಲ್ಲೂಕಿನ ನೂಕಾಪುರ ಗ್ರಾಮದಲ್ಲಿ ನಡೆದಿದೆ.

ಗುಡ್ಡಪ್ಪ ಕುಬೇರಪ್ಪ ಗಂಟಿ (47) ಮೃತ ರೈತ. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಪುತ್ರ  ಇದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ಹೆಸರಿನಲ್ಲಿ 3 ಎಕರೆ 9 ಗುಂಟೆ ಜಮೀನು ಇದೆ. ಸಕಾಲಕ್ಕೆ ಮಳೆ ಬೆಳೆ ಬಾರದೇ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪಿಎಲ್‌ಡಿ ಬ್ಯಾಂಕ್‌ ರಾಣೆಬೆನ್ನೂರು ಮತ್ತು ಹೊನ್ನತ್ತಿ ಕೆವಿಜಿಬಿ ಬ್ಯಾಂಕಿನಲ್ಲಿ ಬೆಳೆಸಾಲ ಅಂದಾಜು ₹ 5 ಲಕ್ಷ ಸಾಲ ಮತ್ತು ವಿವಿಧ ಸಂಘಗಳಲ್ಲಿ ಖಾಸಗಿ ಸಾಲ ಇದೆ ಎಂದು ಕಂದಾಯ ನಿರೀಕ್ಷಕ ವಾಗೀಶ ಮಳೇಮಠ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT