ಹಾವೇರಿ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಹಲವು ಗಣಪತಿ ಮೂರ್ತಿಗಳನ್ನು ಭಾನುವಾರ ವಿಸರ್ಜನೆ ಮಾಡಲಾಯಿತು.

ಗಣೇಶೋತ್ಸವ ನಿಮಿತ್ತ ಆ. 27ರಂದು ಪ್ರತಿಷ್ಠಾಪಿಸಲಾಗಿದ್ದ ಹಲವು ಗಣಪತಿ ಮೂರ್ತಿಗಳನ್ನು ಐದನೇ ದಿನವಾದ ಭಾನುವಾರ ವಿಸರ್ಜಿಸಲಾಯಿತು. ಡಿ.ಜೆ. (ಡಿಸ್ಕ್ ಜಾಕಿ) ಬಳಕೆಗೆ ನಿರ್ಬಂಧ ಹೇರಿದ್ದರಿಂದ, ಭಾರತೀಯ ಸಂಸ್ಕೃತಿಯ ವಾದ್ಯಮೇಳ ಹಾಗೂ ಜಾನಪದ ಕಲಾತಂಡಗಳ ಜೊತೆಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಗಳನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ವಿಸರ್ಜನಾ ಸ್ಥಳಕ್ಕೆ ಕೊಂಡೊಯ್ದು ವಿಸರ್ಜಿಸಿದರು.

ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ತೆರೆದ ವಾಹನಗಳಲ್ಲಿ ವಿಸರ್ಜನಾ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ಜಮಾಯಿಸಿದ್ದ ಯುವಜನತೆ, ವಾದ್ಯಮೇಳದ ಜೊತೆಯಲ್ಲಿ ನೃತ್ಯ ಮಾಡಿದರು. ಪಟಾಕಿಗಳ ಸದ್ದು ಸಹ ಜೋರಾಗಿತ್ತು.

ಗುರುಭವನ ಹಿಂಭಾಗದಲ್ಲಿರುವ ಅಕ್ಕಮಹಾದೇವಿ ಹೊಂಡಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ತಾತ್ಕಾಲಿಕ ಹೊಂಡ ನಿರ್ಮಿಸಲಾಗಿದ್ದು, ಅಲ್ಲಿಯೇ ಬಹುತೇಕ ಮೂರ್ತಿಗಳ ವಿಸರ್ಜನೆಯಾಯಿತು. ವರದಾಹಳ್ಳಿ, ದೇವಗಿರಿ ಸೇರಿದಂತೆ ಹಲವು ಗ್ರಾಮಗಳ ಮೂಲಕ ಹಾದು ಹೋಗಿರುವ ವರದಾ ನದಿಯಲ್ಲಿಯೂ ಕೆಲ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಮೂರ್ತಿಗಳ ವಿಸರ್ಜನೆ ಶಾಂತಿಯುತವಾಗಿ ನಡೆಯಿತು. ಎಲ್ಲ ಕಡೆಯೂ ಪೊಲೀಸರು, ಬಿಗಿ ಭದ್ರತೆ ಕೈಗೊಂಡಿದ್ದರು.

ಡಿಜೆ ಬಳಸಲು ಅನುಮತಿಗೆ ಆಗ್ರಹಿಸಿ ಸಭೆ

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕರ ಗಣಪತಿ ವಿಸರ್ಜನೆಗೆ ಡಿಜೆ ಬಳಕೆಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡುವವರೆಗೂ ವಿಸರ್ಜಿಸದಿರಲು ನಿರ್ಧರಿಸಲಾಯಿತು.

5ನೇ ದಿನಕ್ಕೆ ಗಣಪತಿ ವಿಸರ್ಜನೆಗೆ ತರಿಸಲಾಗಿದ್ದ ಡಿಜೆ ಸೌಂಡ್ ಸಿಸ್ಟ್ಂ ಅನ್ನು ಚಳಗೇರಿ ಟೋಲ್ ಬಳಿ ಭಾನುವಾರ ಪೊಲೀಸರು ತಡೆದು ವಾಪಸ್ ಕಳಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಡಿಮೆ ಡೆಸಿಬಲ್ ಹೊಂದಿರುವ ಎರಡು ಬಾಕ್ಸ್ಗಳನ್ನು ಬಳಸಿಕೊಂಡು ಗಣಪತಿಯನ್ನು ವಿಸರ್ಜಿಸುತ್ತೇವೆ ಎಂದು ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ಅನುಮತಿ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣಪತಿ ಹಬ್ಬ ಆಚರಣೆ ಹಿಂದೂ ಧರ್ಮದ ಪ್ರತೀಕ, ನಮ್ಮ ಸನಾತನ ಸಂಸ್ಕೃತಿಯನ್ನು ಅಳಿಸಲು ಸರ್ಕಾರ ಡಿಜೆ ರದ್ದು ಮಾಡಿ ಹಿಂದೂಗಳ ಮೇಲೆ ಸವಾರಿ ನಡೆಸಿದೆ ಎಂದು ಆರೋಪಿಸಿದರು.

ಮುಖಂಡ ಶಿವಬಸಪ್ಪ ಕುಳೆನೂರ ಮಾತನಾಡಿ, ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಹಿಂದೂ ಧರ್ಮ ಹಾಗೂ ಹಿಂದೂ ಹಬ್ಬಗಳ ಆಚಣೆಗೆ ತನ್ನೀರು ಎರಚಿದೆ. ಇದರಿಂದ ಸಮಾಜಕ್ಕೆ ಮಾರಕ ಎನ್ನುವಂತಹ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ, ಹೀಗಾಗಿ ಡಿಜೆ ಬಳಕೆಗೆ ಅವಕಾಶ ನೀಡುವವರೆಗೂ ಗ್ರಾಮದಲ್ಲಿ ಯಾವುದೇ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶವನ್ನು ಮರು ಪರಿಶೀಲಿಸಿ ಸಕಲ ವಾದ್ಯ ವೈಭವಗಳೊಂದಿಗೆ ಎರಡು ಬಾಕ್ಸ್ ಡಿಜೆಯೊಂದಿಗೆ ಗಣೇಶ ವಿಸರ್ಜನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ನಿಂಗಪ್ಪ ಬಟ್ಟಲಕಟ್ಟಿ, ಶಿವಪುತ್ರಪ್ಪ ಅಗಡಿ, ಚಂದ್ರಶೇಖರ ಆನ್ವೇರಿ, ನಿಂಗಪ್ಪ ಅಂಗಡಿ, ನಾಗನಗೌಡ ಕಲ್ಲಾಪುರ, ನಿಂಗನಗೌಡ ಕಲ್ಲಾಪುರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಗಮನ ಸೆಳೆದ ಮೆರವಣಿಗೆ

ಶಿಗ್ಗಾವಿ: ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಭಾನುವಾರ ಗಣೇಶ ವಿಸರ್ಜನೆ ಮೆರವಣಿಗೆ ಭಕ್ತ ಸಮೂಹದ ನಡುವೆ ಸಡಗರ ಸಂಭ್ರಮದಿಂದ ಜರುಗಿತು. ಕೆಲವರು ಮೂರು, ಐದು, ಏಳು ಹಾಗೂ 11 ದಿನ ಪೂಜಿಸಿ ವಿಸರ್ಜನೆ ಮಾಡಲಾಗುತ್ತದೆ.

ಮೆರವಣಿಗೆಯಲ್ಲಿ ವಾದ್ಯವೃದ್ಧಕ್ಕೆ ತಕ್ಕಂತೆ ಯುವಕರು ಕುಣಿದು ಕುಪ್ಪಳಿಸಿದರು. ಬಣ್ಣ, ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಸಂಭ್ರಮಿಸಿದರು. ನಂತರ ಕೆರೆ ಬಾವಿಯಲ್ಲಿ ಗಣೇಶ ವಿಗ್ರಹ ವಿಸರ್ಜಿಸುವ ಮೂಲಕ ಹಬ್ಬದ ಆಚರಣೆಗೆ ತೆರೆ ಎಳೆದರು.

ಡಿಜಿ ಬಳಕೆಗೆ ವಿದಾಯ:

ಸರ್ಕಾರದ ಆದೇಶದ ಪ್ರಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಡಿಜಿ ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ. ಹೀಗಾಗಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ವಿಗ್ರಹವನ್ನು ಟ್ರ್ಯಾಕ್ಟರ್ದಲ್ಲಿ ಇಟ್ಟುಕೊಂಡು ಪುರಸಭೆ ನೌಕರರು, ಸಿಬ್ಬಂದಿ ಹಾಗೂ ಪುರಸಭೆ ಪೌರಕಾರ್ಮಿಕರು ಒಂದು ಬಣ್ಣದ ಸಮವಸ್ತ್ರ ಧರಿಸಿಕೊಂಡಿದ್ದರು.

ಡಿಜಿ ಬದಲಾಗಿ ಡೊಳ್ಳು ಮೇಳ, ಝಾಂಜ್ ಮೇಳದೊಂದಿಗೆ ವಿಸರ್ಜನೆಯ ಮೆರವಣಿಗೆ ನಡೆಸಿದರು.

ಪುರಸಭೆಯಿಂದ ಆರಂಭವಾದ ಮೆರವಣಿಗೆ ಭಾವಗೀತೆ, ಭಕ್ತಿಗೀತೆಗಳ ಹಾಡುತ್ತಾ, ಡೊಳ್ಳು, ಝಾಂಜ್ ಮೇಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ಸಾಗಿದ್ದರು. ಡಿಜಿ ಧ್ವನಿಗೆ ರಾತ್ರಿ ಇಡೀ ಕುಣಿಯುವ ಯುವಕರಿಗೆ ಮಾದರಿಯಾಗುವಂತೆ. ಡಿಜಿ ಸಂಸ್ಕೃತಿ ದೂರಾಗುವಂತೆ ವಿಸರ್ಜನೆ ಮೆರವಣಿಗೆ ನಡೆಯಿತು. ಪ್ರತಿ ಓಣಿಯಲ್ಲಿ ಮಹಿಳೆಯರು, ಮಕ್ಕಳು ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿದಾಯ ಹೇಳಿದರು.

‘ಗಣೇಶ ಹಬ್ಬದಲ್ಲಿ ಡಿಜಿ ಬಳಕೆ ಭಾರತೀಯ ಸಂಸ್ಕೃತಿಗೆ ಮಾರಕ. ಪಾರಂಪರಿಕೆ ಆಚರಣೆಗೆ ಒತ್ತು ನೀಡಬೇಕು’ ಎಂದು ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಹೇಳಿದರು.

ದ್ವಾದಶ ಜ್ಯೋತಿರ್ಲಿಂಗ ದರ್ಶನಕ್ಕೆ ಚಾಲನೆ

ರಾಣೆಬೆನ್ನೂರು: ಅಶೋಕ ವೃತ್ತದಲ್ಲಿ ವಿರಾಟ್ ಹಿಂದೂ ಮಹಾಸಭಾ ಸಮಿತಿಯಿಂದ ಪ್ರತಿಷ್ಠಾಪಿಸಿರುವ 4ನೇ ವರ್ಷದ ಗಣೇಶೋತ್ಸವದ ದ್ವಾದಶ ಜ್ಯೋತಿರ್ಲಿಂಗ ದರ್ಶನಕ್ಕೆ ಶನಿವಾರ ಮಾಜಿ ಶಾಸಕ ಅರುಣುಕುಮಾರ ಪೂಜಾರ ವಿಘ್ನೇಶ್ವರನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.

ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಗರಸಭೆ ಸದಸ್ಯ ನಾಗೇಂದ್ರಸಾ ಪವಾರ, ಶಿವಕುಮಾರ ಹಾರಕನಾಳ, ಜಗದೀಶ ಯಲಿಗಾರ, ಅಜೇಯ ಜಂಬಿಗಿ, ಸಿದ್ದು ಚಿಕ್ಕಬಿದರಿ, ಪವನಕುಮಾರ ಮಲ್ಲಾಡದ, ಮೈಲಪ್ಪ ಗೋಣಿಬಮ್ಮನವರ, ನಿಂಗರಾಜ ಕೋಡಿಹಳ್ಳಿ, ಅಮೋಘ ಬದಾಮಿ, ಮೃತ್ಯುಂಜಯ ಕಾಕೋಳ, ಜಗದೀಶ ಅಂಕಲಕೋಟಿ, ಪ್ರಕಾಶ ಮಣೇಗಾರ, ಪ್ರಕಾಶ ಮೈದೂರ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.