ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಕಸದ ಸಮಸ್ಯೆಯಿಂದ ಅಪಖ್ಯಾತಿ

ಹಾವೇರಿ: ಎಲ್ಲೆಂದರಲ್ಲಿ ಕಾಣುವ ಕಸದ ರಾಶಿ. ಬೀದಿನಾಯಿ–ಹಂದಿಗಳಿಂದ ರಸ್ತೆಯಲ್ಲಿ ಚಿಲ್ಲಾಪಿಲ್ಲಿಯಾಗಿ ಬೀಳುವ ತ್ಯಾಜ್ಯ. ಗಲೀಜು ಪ್ರದೇಶವಾದ ಮಾರುಕಟ್ಟೆ. ಮೂಗು ಮುಚ್ಚಿಕೊಂಡು ಓಡಾಡುವ ಜನರು...

ನಗರದಲ್ಲಿ ನಿತ್ಯವೂ ಕಂಡುಬರುವ ದೃಶ್ಯವಿದು. ನಗರದಲ್ಲಿ ಕಸ ವಿಲೇವಾರಿಗೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದಾಗಿ ಕಸದ ರಾಶಿಗಳು ವಾರಗಟ್ಟಲೇ ಒಂದೇ ಸ್ಥಳದಲ್ಲಿ ಇರುವಂತಾಗಿದೆ.

ಬಸ್ ನಿಲ್ದಾಣ, ಮಾರುಕಟ್ಟೆ, ಪ್ರಮುಖ ರಸ್ತೆ, ಶಾಲೆ–ಕಾಲೇಜು, ಆಸ್ಪತ್ರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಸದ ರಾಶಿಗಳು ಕಣ್ಣಿಗೆ ಬಿದ್ದರೂ ಅದರ ವಿಲೇವಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ಯಾಲಕ್ಕಿ ಕಂಪಿನ ನಾಡು’ ಎಂಬ ಖ್ಯಾತಿ ಪಡೆದಿರುವ ಹಾವೇರಿ, ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆಯಿಂದ ಅಪಖ್ಯಾತಿಗೆ ಒಳಗಾಗುತ್ತಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹೋಗಿದ್ದು, ಹೂಳು ತೆಗೆಯುವ ಕೆಲಸವಾಗಿಲ್ಲ. ಚರಂಡಿಯಲ್ಲಿ ನೀರು ನಿಂತು, ದುರ್ನಾತ ಬರುತ್ತಿದ್ದರೂ ನಗರಸಭೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದರ ಜೊತೆಯಲ್ಲಿಯೇ, ಕಸದ ಸಮಸ್ಯೆಯೂ ಉಲ್ಬಣಿಸುತ್ತಿದೆ.

ಮನೆ ಹಾಗೂ ವ್ಯಾಪಾರ ಸ್ಥಳದಿಂದ ಕಸ ಸಂಗ್ರಹ ಮಾಡುವ ವ್ಯವಸ್ಥೆ ನಗರದಲ್ಲಿದೆ. ಆದರೆ, ಬಹುತೇಕ ಜನರು ಇಂದಿಗೂ ರಸ್ತೆ ಅಕ್ಕ–ಪಕ್ಕದಲ್ಲಿ ಕಸದ ರಾಶಿ ಹಾಕುತ್ತಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಕಸ ಸಂಗ್ರಹಕ್ಕೆ ಇಟ್ಟಿರುವ ಕಬ್ಬಿಣದ ಬುಟ್ಟಿಗಳು ಕಿತ್ತುಹೋಗಿ ವರ್ಷವೇ ಆಗಿದೆ. ಅದೇ ಸ್ಥಳದಲ್ಲೂ ಕಸದ ರಾಶಿ ಹೆಚ್ಚಾಗುತ್ತಿದೆ.

ಮನೆ ಮನೆ ಕಸ ಸಂಗ್ರಹಿಸುವ ಸಿಬ್ಬಂದಿ, ರಸ್ತೆ ಅಕ್ಕ–ಪಕ್ಕದ ಕಸದ ರಾಶಿ ಸಂಗ್ರಹಿಸುತ್ತಿಲ್ಲ. ಅದು ತಮಗೆ ಸಂಬಂಧವಿಲ್ಲವೆಂದು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಹಲವು ದಿನಗಳ ಕಾಲ ಕಸದ ರಾಶಿ ವಿಲೇವಾರಿಯಾಗುತ್ತಿಲ್ಲ. ಕಸದ ಸ್ಥಳದಲ್ಲಿ ದುರ್ನಾತ ಬರುತ್ತಿದ್ದು, ರಸ್ತೆಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿಯಿದೆ.

ಎಂ.ಜಿ. ರಸ್ತೆ, ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ, ದಾನೇಶ್ವರಿನಗರ, ಕೇರಿಮತ್ತೀಹಳ್ಳಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಹಾನಗಲ್ ರಸ್ತೆ, ಹಳೇ ಪಿ.ಬಿ. ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿತ್ಯವೂ ಕಸದ ರಾಶಿ ಕಾಣಸಿಗುತ್ತಿದೆ. ಕಸ ಸಂಗ್ರಹ ಹಾಗೂ ವಿಲೇವಾರಿ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡದಿರುವುದೇ ಕಸದ ಸಮಸ್ಯೆ ಹೆಚ್ಚಾಗಲು ಕಾರಣವೆಂದು ಜನರು ದೂರುತ್ತಿದ್ದಾರೆ.

ರಸ್ತೆಯಲ್ಲಿ ಹರಡುವ ತ್ಯಾಜ್ಯ: ‘ಮಾರುಕಟ್ಟೆ ಪ್ರದೇಶದಲ್ಲಿರುವ ಅಂಗಡಿಯವರು ಸಹ ಕಸವನ್ನು ರಸ್ತೆಯ ಅಕ್ಕ–ಪಕ್ಕದಲ್ಲಿ ರಾಶಿ ಹಾಕುತ್ತಿದ್ದಾರೆ. ಈ ಕಸ, ಬೀದಿನಾಯಿಗಳು ಹಾಗೂ ಹಂದಿಗಳಿಂದಾಗಿ ರಸ್ತೆಯಲ್ಲೆಲ್ಲ ಹರಡುತ್ತಿದೆ’ ಎಂದು ನಿವಾಸಿಗಳು ದೂರಿದರು.

‘ಕಸವೆಲ್ಲವೂ ರಸ್ತೆಯಲ್ಲಿ ಚಿಲ್ಲಾಪಿಲ್ಲಿಯಾಗಿ ಬೀಳುತ್ತಿದೆ. ಈ ಮಾರ್ಗದಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಾರುಕಟ್ಟೆ ಪ್ರದೇಶದಲ್ಲಂತೂ ಕಸದ ಮೇಲೆಯೇ ನಡಿಗೆ ಎಂಬ ಸ್ಥಿತಿಯಿದೆ. ಮಕ್ಕಳು, ವೃದ್ಧರು ಮಾರುಕಟ್ಟೆಗೆ ಹೋಗುವ ಸ್ಥಿತಿಯಿಲ್ಲ. ಹೋದರೆ, ಆರೋಗ್ಯ ಸಮಸ್ಯೆ ಉಂಟಾಗುವುದು ಖಚಿತ’ ಎಂದು ಹೇಳಿದರು.

ತೆರಿಗೆ ಸಂಗ್ರಹ: ‘ರಸ್ತೆಯ ಅಕ್ಕ–ಪಕ್ಕದಲ್ಲಿ ಹಾಗೂ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಂದ ನಗರಸಭೆಯವರು ತೆರಿಗೆ ಸಂಗ್ರಹ ಮಾಡುತ್ತಾರೆ. ಆದರೆ, ಕಸ ವಿಲೇವಾರಿಗೆ ಮಾತ್ರ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ತೆರಿಗೆ ಮಾತ್ರ ಸಂಗ್ರಹಿಸಿ ಲೆಕ್ಕೆ ತೋರಿಸುವ ಅಧಿಕಾರಿಗಳು, ಕಸ ಸಂಗ್ರಹ ಹಾಗೂ ವಿಲೇವಾರಿಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ತರಕಾರಿ ವ್ಯಾಪಾರಿ ಇಮಾಮ್ ದೂರಿದರು.

‘ನಾನು ನಿತ್ಯವೂ ತರಕಾರಿ ಮಾರುತ್ತೇನೆ. ನಗರಸಭೆಯವರಿಗೆ ಜಾಗದ ಶುಲ್ಕ ನೀಡುತ್ತೇನೆ. ಸಂಜೆಯಾದ ನಂತರ, ಉಳಿದ ತರಕಾರಿಯನ್ನು ಮಾರುಕಟ್ಟೆಯ ನಿಗದಿತ ಜಾಗದಲ್ಲಿ ಹಾಕುತ್ತೇನೆ. ಆದರೆ, ಈ ಕಸವನ್ನು ಎರಡ್ಮೂರು ದಿನವಾದರೂ ವಿಲೇವಾರಿ ಮಾಡುವುದಿಲ್ಲ. ವಿಲೇವಾರಿಯಾಗದ ಕಸದಿಂದ ದುರ್ನಾತ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಸದಸ್ಯರ ಮಾತು ಕೇಳದ ಅಧಿಕಾರಿಗಳು’

ಹಾವೇರಿ ನಗರಸಭೆಯಲ್ಲಿರುವ ಅಧಿಕಾರಿಗಳು ಸದಸ್ಯರ ಮಾತು ಕೇಳುತ್ತಿಲ್ಲವೆಂಬ ಆರೋಪವಿದೆ. ಕಸ ಹಾಗೂ ಇತರೆ ಸಮಸ್ಯೆ ಅನುಭವಿಸುತ್ತಿರುವ ಜನರು ತಮ್ಮ ಸದಸ್ಯರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಅದೇ ಸಮಸ್ಯೆಯನ್ನು ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲವೆಂಬ ಆರೋಪ ಹೆಚ್ಚಾಗಿದೆ. ‘ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರು ಜನರಿಂದ ಆಯ್ಕೆಯಾಗಿ ನಗರಸಭೆಗೆ ಬಂದಿದ್ದಾರೆ. ಆದರೆ ಇವರು ಹೇಳಿದ ಮಾತುಗಳನ್ನು ಅಧಿಕಾರಿಗಳು ಕೇಳುತ್ತಿಲ್ಲ. ಇದೇ ಕಾರಣಕ್ಕೆ ನಗರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕಸ ಕುಡಿಯುವ ನೀರು ಸ್ವಚ್ಛತೆ ಕೊರತೆ ಸೇರಿ ವಿವಿಧ ಸಮಸ್ಯೆಗಳು ಹೆಚ್ಚಾಗುತ್ತಿವೆ’ ಎಂದು ಸದಸ್ಯರೊಬ್ಬರು ಹೇಳಿದರು.

ಧರಣಿ ಸಂದರ್ಭದಲ್ಲೂ ಉಂಟಾಗಿದ್ದ ಸಮಸ್ಯೆ

‘ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಗುತ್ತಿಗೆ ಆಧಾರದಲ್ಲಿರುವ ನೌಕರರಿಗೆ ನೇರ ವೇತನ ಪಾವತಿ ಮಾಡಬೇಕು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ಇತ್ತೀಚೆಗೆ ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿಯೂ ಹಾವೇರಿ ನಗರದಲ್ಲಿ ಕಸದ ಸಮಸ್ಯೆ ಉಂಟಾಗಿತ್ತು. ಈಗ ಯಾವುದೇ ಧರಣಿಯಿಲ್ಲ. ಅಷ್ಟಾದರೂ ಕಸದ ವಿಲೇವಾರಿ ಆಗುತ್ತಿಲ್ಲವೆಂದು ಜನರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಕಸ ಸಂಗ್ರಹ ವಾಹನದ ಚಾಲಕರು ಲೋಡರ್ಸ್ ಕ್ಲೀನರ್ಸ್ ಮೇಲ್ವಿಚಾರಕರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಗರಸಭೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿಲ್ಲ. ಇದರಿಂದಾಗಿ ಕಸದ ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ’ ಎಂದು ಜನರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.