ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ| ಅಡುಗೆ ಅನಿಲ ಸೋರಿಕೆ ಭೀತಿ: ಜಿಲ್ಲಾಸ್ಪತ್ರೆಯಿಂದ ಹೊರಗೆ ಓಡಿಬಂದ ರೋಗಿಗಳು

Published 14 ಆಗಸ್ಟ್ 2024, 6:00 IST
Last Updated 14 ಆಗಸ್ಟ್ 2024, 6:00 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿರುವ‌ ಭೀತಿ ಉಂಟಾಗಿದ್ದರಿಂದ, ರೋಗಿಗಳು ಹಾಗೂ ಸಂಬಂಧಿಕರು ಕಟ್ಟಡದಿಂದ ಹೊರಗೆ ಓಡಿಬಂದು ರಸ್ತೆಯಲ್ಲಿ ‌ನಿಂತುಕೊಂಡಿದ್ದರು.

ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ರೋಗಿಗಳು, ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾರ್ಡ್‌ವೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಇರಿಸಲಾಗಿತ್ತು. ರೋಗಿಯೊಬ್ಬರು ಸಿಲಿಂಡರ್‌ಗೆ ಒದ್ದಿದ್ದರೆಂದು ಗೊತ್ತಾಗಿದೆ. ಇದರಿಂದಾಗಿ ಸಿಲಿಂಡರ್ ಉರುಳಿಬಿದ್ದು, ವಾಸನೆ ಬರಲಾರಂಭಿಸಿತ್ತು.

ಆತಂಕಗೊಂಡ ರೋಗಿಗಳು, ಬೆಡ್ ಮೇಲಿಂದ ಎದ್ದು ಸಂಬಂಧಿಕರ ಸಮೇತ ಹೊರಗೆ ಓಡಿ ಬಂದಿದ್ದರು. ಕೆಲ ನಿಮಿಷಗಳಲ್ಲಿ ಜಿಲ್ಲಾಸ್ಪತ್ರೆಯ ಎದುರಿನ ರಸ್ತೆ, ರೋಗಿಗಳು ಹಾಗೂ ಸಂಬಂಧಿಕರಿಂದ ತುಂಬಿತ್ತು.

ಕೆಲವರು, ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ಓಡಿಬಂದಿದ್ದರು. ಬಾಣಂತಿಯರು, ಅಪಘಾತದಲ್ಲಿ ಗಾಯಗೊಂಡವರು, ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಹೊರಗೆ ಓಡಿ ಬಂದು ರಸ್ತೆಯಲ್ಲಿ‌ ನಿಂತಿದ್ದರು. ಕೆಲವರು ಡ್ರಿಪ್ಸ್ ಸಮೇತವೇ ಹೊರಗೆ ಬಂದಿದ್ದರು.

ಜಿಲ್ಲಾಸ್ಪತ್ರೆ ಸಿಬ್ಬಂದಿಯೇ ಸಿಲಿಂಡರ್ ಅನ್ನು ಹೊರಗೆ ತಂದು ಬೇರೆಡೆ ಸಾಗಿಸಿದರು. ಇದಾದ ನಂತರ, ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆ ಒಳಗೆ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT