‘ಹಣ ವಸೂಲಿ: ಮೇಲ್ನೋಟಕ್ಕೆ ಪತ್ತೆ’
‘ಪ್ರತಿಯೊಂದು ಮನೆಯಿಂದ ತಲಾ ₹ 100 ವಸೂಲಿ ಮಾಡಿರುವ ಪ್ರಕರಣದಲ್ಲಿ ಪಿಡಿಒ ಅವರ ಕರ್ತವ್ಯ ಲೋಪ ಇರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಸಿಇಒ ಅವರಿಗೆ ವರದಿ ನೀಡಲಾಗುವುದು’ ಎಂದು ಅಧಿಕಾರಿಗಳು ಹೇಳಿದರು. ಪ್ರತಿಭಟನಕಾರರ ಜೊತೆ ಮಾತನಾಡಿದ ಅಧಿಕಾರಿಗಳು ‘ಪ್ಲೇಟ್ ಬಗ್ಗೆ ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ನೀಡಿರುವ ರಶೀದಿಯನ್ನೂ ಪಡೆಯಲಾಗಿದೆ’ ಎಂದರು. ‘ಪಿಡಿಒ ಮೇಲೆ ಕ್ರಮ ಆಗಲಿದೆ. ಇತರೆ ಅವ್ಯವಹಾರ ನಡೆದಿದ್ದರೆ ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದರು.