ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ಹಾವೇರಿ | ಹೋರಿ ಹಬ್ಬ: ಅಹೋರಾತ್ರಿ ಧರಣಿ ಡಿ.6ರಿಂದ

ಹಬ್ಬದ ಆಚರಣೆಗೆ 18 ಷರತ್ತು ವಿಧಿಸಿರುವ ಸರ್ಕಾರ * 500ಕ್ಕೂ ಹೆಚ್ಚು ಹೋರಿಗಳ ಸಮೇತ ಮೆರವಣಿಗೆ
Published : 24 ನವೆಂಬರ್ 2025, 4:04 IST
Last Updated : 24 ನವೆಂಬರ್ 2025, 4:04 IST
ಫಾಲೋ ಮಾಡಿ
Comments
‘ಪಾಂಡವರ ಕಾಲದ ಆಚರಣೆ’
‘ಮಹಾಭಾರತದ ಪಾಂಡವರ ಕಾಲದಿಂದಲೂ ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬದ ಆಚರಣೆ ಚಾಲ್ತಿಯಲ್ಲಿದೆ. ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ರೈತರು ಹೋರಿಗಳನ್ನು ಅಲಂಕರಿಸಿ ಊರಿನಲ್ಲಿ ಮೆರವಣಿಗೆ ಮಾಡುತ್ತಾರೆ. ಹೋರಿ ಸ್ಪರ್ಧೆಯಲ್ಲೂ ಪಾಲ್ಗೊಳ್ಳುತ್ತಾರೆ. ಹಬ್ಬದ ಹೋರಿಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ’ ಎಂದು ಮಾಲೀಕರು ಹೇಳಿದರು. ‘ದೀಪಾವಳಿ ನಂತರ ಜಿಲ್ಲೆಯ ಹಲವು ಕಡೆಗಳಲ್ಲಿ ಸಾಲು ಸಾಲು ಹೋರಿ ಬೆದರಿಸುವ ಸ್ಪರ್ಧೆಗಳು ನಡೆಯುತ್ತಿದ್ದವು. ಷರತ್ತು ವಿಧಿಸಿರುವುದರಿಂದ ಸ್ಪರ್ಧೆ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಬ್ಬದ ದಿನದ 15 ದಿನಕ್ಕೂ ಮುನ್ನ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ಪಶು ಸಂಗೋಪನೆ ಇಲಾಖೆ ವೈದ್ಯರಿಂದ ಹೋರಿಯ ಆರೋಗ್ಯದ ಪ್ರಮಾಣ ಪತ್ರ ಪಡೆಯಬೇಕು. ವಿಡಿಯೊ ಚಿತ್ರೀಕರಣ ಮಾಡಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ಪಾಲಿಸಲು ಅಡಚಣೆಗಳಿವೆ. ಪ್ರಮುಖ ಷರತ್ತುಗಳನ್ನು ಸಡಿಲಿಸಿ ಹಬ್ಬದ ಆಚರಣೆಗೆ ಅವಕಾಶ ಮಾಡಿಕೊಡಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT