‘ಯುವಕನೊಂದಿಗೆ ಕಳುಹಿಸಿದ್ದು ಸರಿಯಲ್ಲ’
‘ಅನ್ಯ ಧರ್ಮದ ಯುವಕನೊಂದಿಗೆ ಮದುವೆಯಾಗಲು ಕಾನೂನು ಪ್ರಕಾರ 30 ದಿನಗಳ ಪ್ರಕ್ರಿಯೆಗಳಿವೆ. ಯುವಕ ಮತ್ತು ಯುವತಿ ಗೋವಾದಲ್ಲಿ ಮದುವೆಯಾದ ಬಗ್ಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ದಾಖಲೆಗಳಿದ್ದರೂ ಅದನ್ನು ಕಾನೂನು ಒಪ್ಪುವುದಿಲ್ಲ. ಯುವಕನೊಂದಿಗೆ ಯುವತಿಯನ್ನು ತೆರಳಲು ಬಿಟ್ಟಿದ್ದು ಸರಿಯಲ್ಲ’ ಎಂದು ಯುವತಿಯ ಹೆತ್ತವರು ವಾದಿಸಿದರು. ‘ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹದ ಅಧಿಕೃತ ನೋಂದಣಿಯಾಗಬೇಕು. ಅಲ್ಲಿಯ ತನಕ ಯುವತಿಯನ್ನು ಸಾಂತ್ವನ ಕೇಂದ್ರದಲ್ಲಿ ಇಡಬೇಕು. ಅಥವಾ ಪಾಲಕರ ಜವಾಬ್ದಾರಿಗೆ ಒಪ್ಪಿಸಬೇಕಿತ್ತು. ಯುವತಿಯ ಜೀವಕ್ಕೆ ಅಪಾಯವಾದರೆ ಯಾರು ಹೊಣೆ’ ಎಂದು ಯುವತಿಯ ಕಡೆಯವರು ಪ್ರಶ್ನಿಸಿದ್ದಾರೆ.