ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಜನರಿಗೆ ಸೋಂಕು ದೃಢ

ಜಿಲ್ಲೆಯಲ್ಲಿ 38ಕ್ಕೇರಿದ ಕೋವಿಡ್‌–19 ಪ್ರಕರಣಗಳ ಸಂಖ್ಯೆ: 17 ಪ್ರಕರಣ ಸಕ್ರಿಯ
Last Updated 20 ಜೂನ್ 2020, 15:22 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಶನಿವಾರ 12 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 38 ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 17 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಶಿಗ್ಗಾವಿನಗರದ ವ್ಯಕ್ತಿಗಳಾದ 44 ವರ್ಷದ ಪಿ-8291 ಮಹಿಳೆ, 48 ವರ್ಷದ ಪಿ-8292 ಪುರುಷ, 23 ವರ್ಷದ ಪಿ- 8293 ಪುರುಷ, 16 ವರ್ಷದ ಪಿ- 8294 ಯುವತಿ, 75 ವರ್ಷದ ಪಿ-8295 ವೃದ್ಧೆ, 85 ವರ್ಷದ ಪಿ- 8296 ವೃದ್ಧೆ, 45 ವರ್ಷದ ಪಿ- 8642 ಮಹಿಳೆ, 20 ವರ್ಷದ ಪಿ- 8643 ಮಹಿಳೆ, 15 ವರ್ಷದ ಪಿ- 8644 ಯುವತಿ, 04 ವರ್ಷದ ಪಿ-8645 ಮಗು, 60 ವರ್ಷದ ಪಿ-8646 ಪುರುಷ, 40 ವರ್ಷದ ಪಿ- 8647 ಪುರುಷನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಪಿ- 6832ರ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ 12 ಜನರಿಗೆ ಸೋಂಕು ದೃಢಪಟ್ಟಿದೆ. ಎಲ್ಲ ಸೋಂಕಿತರ ಗಂಟಲು ದ್ರವವನ್ನು ಜೂನ್ 17ರಂದು ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 19ರ ರಾತ್ರಿ ಕೋವಿಡ್ ಸೋಂಕಿತರೆಂದು ಲ್ಯಾಬ್ ವರದಿ ಬಂದ ಕೂಡಲೇ ಎಲ್ಲ ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪ್ರವಾಸ ಹಿನ್ನೆಲೆ:

ಶಿಗ್ಗಾವಿ ನಗರದ ದೇಸಾಯಿ ಗಲ್ಲಿಯಲ್ಲಿ ವಾಸವಾಗಿದ್ದ ಪಿ- 8291, (44 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು), ಪಿ- 8292 (48 ವರ್ಷದ ಪುರುಷ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು). ಪಿ- 8293 (23 ವರ್ಷದ ಪುರುಷ ವಾಸವಾಗಿದ್ದರು). ಪಿ- 8294 (16 ವರ್ಷದ ಹುಡುಗಿ ವಾಸವಾಗಿದ್ದರು). ಪಿ- 8295 (75 ವರ್ಷದ ವೃದ್ಧೆ ವಾಸವಾಗಿದ್ದರು), ಪಿ- 8643 (20 ವರ್ಷ ಮಹಿಳೆ ತನ್ನ ತಂದೆ-ತಾಯಿಯೊಂದಿಗೆ), ಪಿ- 8647(40 ವರ್ಷದ ಪುರುಷ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ) ವಾಸವಾಗಿದ್ದರು.

ಶಿಗ್ಗಾವಿಯ ಗೌಡರ ಓಣಿಯಲ್ಲಿ ಪಿ-8296 (85 ವರ್ಷದ ವೃದ್ಧೆ ತನ್ನ ಮಕ್ಕಳೊಂದಿಗೆ), ಪಿ-8642( 45 ವರ್ಷ ಮಹಿಳೆ ತನ್ನ ಗಂಡ ಹಾಗೂ ಮಕ್ಕಳೊಂದಿಗೆ), ಪಿ-8644 (15 ವರ್ಷದ ಹುಡುಗಿ ತನ್ನ ತಂದೆ ತಾಯಿಯೊಂದಿಗೆ), ಪಿ-8645 (ನಾಲ್ಕು ವರ್ಷದ ಮಗು ತನ್ನ ತಂದೆ-ತಾಯಿಯೊಂದಿಗೆ) ಹಾಗೂ ಪಿ-8646 (60 ವರ್ಷದ ಪುರುಷ ತನ್ನ ಪತ್ನಿ ಮಕ್ಕಳೊಂದಿಗೆ) ವಾಸವಾಗಿದ್ದರು.

ಪಿ-33 (45 ವರ್ಷದ ಮಹಿಳೆ) ಪಿ-34(20 ವರ್ಷದ ಮಹಿಳೆ ತನ್ನ ತಂದೆ ತಾಯಿಯೊಂದಿಗೆ ವಾಸವಾಗಿದ್ದರು) ಹಾಗೂ ಶಿಗ್ಗಾವಿ ನಗರದ ಗೌಡರ ಓಣಿಯ ಹಾಗೂ ದೇಸಾಯಿಗಲ್ಲಿ ರಸ್ತೆಯೊಳಗೊಂಡಿರುವ 100 ಪ್ರದೇಶವನ್ನು ಕಂಟೈನ್ಮೆಂಟ್‌ ವಲಯವಾಗಿ ಪರಿವರ್ತಿಸಲಾಗಿದೆ. ಸುತ್ತಲಿನ 200 ಮೀ.ಪ್ರದೇಶವನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಶಿಗ್ಗಾವಿ ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT