ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ಏರಿ ಬಂದು ಬಜೆಟ್ ಮಂಡನೆ

Last Updated 9 ಫೆಬ್ರವರಿ 2023, 16:21 IST
ಅಕ್ಷರ ಗಾತ್ರ

ಹಿರೇಕೆರೂರ: ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಂಠಾಧರ ಅಂಗಡಿ ಗುರುವಾರ ಕುದುರೆ ಏರಿ ಬಂದು ಪಟ್ಟಣ ಪಂಚಾಯ್ತಿಯ 2023-24ನೇ ಸಾಲಿನ ಬಜೆಟ್ ಮಂಡಿಸಿ ಗಮನ ಸೆಳೆದರು.

ಮುಂಬರುವ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ ಒಟ್ಟು ₹10.56 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಪ‍ಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹10.51 ಕೋಟಿ ವೆಚ್ಚ ಮಾಡಲು ಅಂದಾಜಿಸಲಾಗಿದೆ. ಒಟ್ಟು ₹4.50 ಲಕ್ಷದ ಉಳಿತಾಯ ಬಜೆಟ್‌ ಮಂಡಿಸಲಾಗಿದೆ.

ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಕಂಠಾಧರ ಅಂಗಡಿ ಆಯ–ವ್ಯಯದ ಸಂಕ್ಷಿಪ್ತ ವಿವರಣೆ ನೀಡಿ, ಸದಸ್ಯರಿಂದ ಅನುಮೋದನೆ ಪಡೆದರು.

‘ವೇಗವಾಗಿ ಬೆಳೆಯುತ್ತಿರುವ ನಗರದ ಅವಶ್ಯಕತೆಗಳನ್ನು ಗಮನವಿರಿಸಿಕೊಂಡು ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಲಾಗಿದೆ. ಹಿಂದುಳಿದ ಬಡಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಹಣಕಾಸು, ಕೇಂದ್ರ ಹಣಕಾಸು ಅಯೋಗ ಹಾಗೂ ವಿಶೇಷ ಅನುದಾನದಡಿಯಲ್ಲಿ ಪಟ್ಟಣದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡಲಾಗಿದೆ’ ಎಂದು ಸಭೆಗೆ ವಿವರಿಸಿದರು. ನಂತರ 01-02-2022ರಿಂದ 28-02-2023ರ ವರೆಗಿನ ಖರ್ಚಿನ ಬಗ್ಗೆ ಚರ್ಚೆ ನಡೆಸಲಾಯಿತು.
ನಂತರ ಬಜೆಟ್ ಮೇಲೆ ಚರ್ಚೆ ನಡೆಸಲಾಯಿತು.

ಬಜೆಟ್‌ನಲ್ಲಿ ಪಟ್ಟಣಕ್ಕೆ ಅನುಕೂಲವಾದ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಬೇಕಿತ್ತು. ಅದರಲ್ಲೂ ಪಟ್ಟಣದಲ್ಲಿನ ರಸ್ತೆ ಮತ್ತು ಚರಂಡಿ ದುರಸ್ತಿಗೆ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿತ್ತು ಎಂದು ಕೆಲ ಸದಸ್ಯರು ಸಲಹೆ ನೀಡಿದರು.

ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ, ಅಕೌಂಟೆಂಟ್ ನಾಗರಾಜ ಶಾನಬೋಗ, ಉಪಾಧ್ಯಕ್ಷೆ ವಿಜಯಶ್ರೀ ಬಂಗೇರ ಸದಸ್ಯರಾದ ಕುಸುಮಾ ಬಣಕಾರ, ಸುಧಾ ಚಿಂದಿ, ದಿಲ್ಲಶಾದ ಬಳಿಗಾರ, ಸನಾವುಲ್ಲಾ ಮಕಾನದಾರ, ಚಂದ್ರಕಲಾ ಕೋರಿಗೌಡ್ರ, ಶಂಶಾದ ಕುಪ್ಪೇಲೂರ, ರಾಜು ಕರಡಿ, ಹನುಮಂತಪ್ಪ ಕುರುಬರ, ರಮೇಶ ಕೋಡಿಹಳ್ಳಿ, ರಮೇಶ ತೋರಣಗಟ್ಟಿ, ಬಸವರಾಜ ಕಟ್ಟಿಮನಿ, ಶಿವಕುಮಾರ ತಿಪ್ಪಶೇಟ್ಟಿ, ಪೂಜಾ ತಂಬಾಕದ, ಅಲ್ತಾಫ್ ಖಾನ್ ಪಠಾಣ, ರಜಿಯಾ ಅಸದಿ, ಕವಿತಾ ಹಾರ್ನಳ್ಳಿ, ಹೊನ್ನಪ್ಪ ಸಾಲಿ, ಹನುಮಂತಪ್ಪ ಮಡಿವಾಳರ ಹಾಗೂ ಪ.ಪಂ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT