‘37 ಕೆ.ಜಿ. ಚಿನ್ನದಲ್ಲಿ ಜಮೀನು ಖರೀದಿ’
‘2007ರಲ್ಲಿ ಶಿವಲಿಂಗ ಸ್ವಾಮೀಜಿಯವರಿಗೆ ಚಿನ್ನದ (ಸುವರ್ಣ) ತುಲಾಭಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಂಗ್ರಹವಾಗಿದ್ದ 37 ಕೆ.ಜಿ. ಚಿನ್ನದಲ್ಲಿ 49 ಎಕರೆ ಜಮೀನು ಖರೀದಿಸಲಾಗಿದೆ’ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಿಸಿದರು. ‘ಜಾತ್ರಾ ಕಮಿಟಿ ಗೌರವಾಧ್ಯಕ್ಷನಾಗಿದ್ದ ನಾನು ಅಂದು ಶಾಸಕನೂ ಆಗಿದ್ದೆ. ಭಕ್ತರೆಲ್ಲರೂ ಸೇರಿಕೊಂಡು ಚಿನ್ನದ ತುಲಾಭಾರ ಮಾಡಿದೆವು. ಈಗಿನ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಬಳಿ 49 ಎಕರೆ ಜಮೀನು ಖರೀದಿಸಿದ್ದೆವು. ಜಮೀನು ವಿಚಾರವಾಗಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರು. ಈಗ 25 ಎಕರೆಯ ವ್ಯಾಜ್ಯ ಮುಗಿದಿದೆ. ಉಳಿದ 24 ಎಕರೆ ಜಮೀನಿನ ವ್ಯಾಜ್ಯ ಬಾಕಿಯಿದೆ’ ಎಂದರು.