ಬುಧವಾರ, ಸೆಪ್ಟೆಂಬರ್ 29, 2021
20 °C

ಅಕ್ರಮ ದಾಸ್ತಾನು: 27 ಕ್ವಿಂಟಲ್‌ ಪಡಿತರ ಅಕ್ಕಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಣೆಬೆನ್ನೂರು ನಗರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 27 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ತಹಶೀಲ್ದಾರ್‌ ಶಂಕರ್‌ ಜಿ.ಎಸ್‌. ನೇತೃತ್ವದ ತಂಡ ಮಂಗಳವಾರ ವಶಪಡಿಸಿಕೊಂಡಿದೆ. 

ರಾಣೆಬೆನ್ನೂರು ನಗರದ ವಿದ್ಯಾನಗರ ಬಡಾವಣೆಯ ದೀಪಕ್‌ ಕೊಟ್ಟೂರು ಎಂಬಾತ ಪಡಿತರ ಚೀಟಿಗಳಿಗೆ ವಿತರಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ, ತನ್ನ ಲಾಭಕ್ಕಾಗಿ ಬೇರೆ ಕಡೆಗೆ ಸಾಗಣೆ ಮಾಡುವ ಉದ್ದೇಶದಿಂದ ನಗರಸಭೆ ಕ್ರೀಡಾಂಗಣದ ಸಮೀಪದ ಮಳಿಗೆಯೊಂದರಲ್ಲಿ 59 ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ. 

ದಾಳಿ ನಡೆಸಿದ ತಂಡದಲ್ಲಿ ಆಹಾರ ನಿರೀಕ್ಷಕರಾದ ಸ್ಟೀವನ್‌ ಅಂಗಡಿ, ಎಂ.ಸಿ. ಮೇಗಳಮನಿ, ಆರ್‌.ಟಿ. ಸುರೇಶ ಹಾಗೂ ಆಹಾರ ಶಿರಸ್ತೇದಾರ ಎಂ.ಎಸ್‌.ಪಾಟೀಲ ಇದ್ದರು.

ಆರೋಪಿ ಪರಾರಿಯಾಗಿದ್ದು, ಈತನ ವಿರುದ್ಧ ರಾಣೆಬೆನ್ನೂರು ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು