ರಾಣೆಬೆನ್ನೂರು: ‘ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ, ಕನ್ನಡ ಮನಸುಗಳ ನಾಡಿಮಿಡಿತವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಆಚೆಗೂ ತನ್ನ ಕಂಪನ್ನು ಪಸರಿಸುತ್ತಿರುವುದು ಹೆಮ್ಮೆಯ ವಿಚಾರ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು.

ಇಲ್ಲಿನ ವಾಗೀಶ ನಗರದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯ ಪರಿಷತ್ತು ಅನ್ನು 1915ರ ಮೇ 5ರಂದು ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದರು. ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನಂತೆ ರೂಪಗೊಂಡು, ಇಂದು ಗಡಿನಾಡಿನ ಆಚೆಗೂ ಕನ್ನಡವನ್ನು ಬೆಳೆಸುತ್ತಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೊತೆಗೆ ವಿದ್ಯಾರ್ಥಿಗಳಿಗಾಗಿ ಎಂ.ಫಿಲ್ ಮತ್ತು ಪಿಎಚ್. ಡಿ ಕೋರ್ಸ್ ಪರಿಚಯಿಸಿ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

ಉಪನ್ಯಾಸಕ ಕಾಂತೇಶ ಅಂಬಿಗೇರ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶಿಗ್ಲಿ ಅಧ್ಯಕ್ಷತೆ ವಹಿಸಿದ್ದರು. ವರ್ತಕ ಜಿ.ಜಿ. ಹೊಟ್ಟಿಗೌಡರ, ನಿತ್ಯಾನಂದ ಕುಂದಾಪುರ, ಕೆ.ಎಚ್. ಮುಕ್ಕಣ್ಣನವರ, ಕೆ.ಸಿ. ಕೋಮಲಾಚಾರ್, ಆರ್.ಎನ್. ಅಡಿಗೇರ, ಚಂದ್ರಶೇಖರ್ ಮಡಿವಾಳರ, ಎಚ್.ಎಚ್. ಜಾಡರ, ಗಾಯತ್ರಮ್ಮ ಕುರುವತ್ತಿ, ಜಗದೀಶ ಮಳೆಮಠ, ಎಚ್.ಎಸ್. ಮುದಿಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.