ಹಾವೇರಿ: ಜಿಲ್ಲೆಯಲ್ಲಿರುವ 4.18 ಲಕ್ಷ ಮನೆಗಳ ಪೈಕಿ 4.13 ಲಕ್ಷ ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನೂ 5,008 ಮನೆಗಳ ಸಮೀಕ್ಷೆ ಮಾತ್ರ ಬಾಕಿ ಉಳಿದಿದೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಮೀಕ್ಷೆಗೆ ಜಿಲ್ಲೆಯಲ್ಲಿ ಮೊದಲ ದಿನದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು, ಈಗಾಗಲೇ ಶೇ 98.8ರಷ್ಟು ಗುರಿ ಸಾಧನೆಯಾಗಿದೆ.

‘ಜಿಲ್ಲೆಯಲ್ಲಿ ವಿದ್ಯುತ್ ಮೀಟರ್ ಆಧರಿಸಿ 4,18,516 ಮನೆಗಳನ್ನು ಗುರುತಿಸಲಾಗಿದೆ. ಬುಧವಾರ ಸಂಜೆ 5 ಗಂಟೆಯ ಅಂಕಿ–ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 4,13,508 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಪ್ರತಿಯೊಂದು ಮನೆಗೂ ತೆರಳಿದ್ದ ಸಮೀಕ್ಷೆದಾರರು, ಕುಟುಂಬದವರ ಮಾಹಿತಿ ಕಲೆಹಾಕಿ ಆ್ಯಪ್ನಲ್ಲಿ ದಾಖಲಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಮೀಕ್ಷೆದಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಜಿಲ್ಲೆಯ ಮನೆಗಳನ್ನು 3,777 ಬ್ಲಾಕ್ಗಳಾಗಿ ವಿಂಗಡಿಸಿ, ಒಂದೊಂದು ಬ್ಲಾಕ್ಗೆ ಒಬ್ಬೊಬ್ಬ ಸಮೀಕ್ಷೆದಾರರನ್ನು ನಿಯೋಜಿಸಲಾಗಿದೆ. ಈ ಪೈಕಿ 1,200ಕ್ಕೂ ಹೆಚ್ಚು ಶಿಕ್ಷಕರು, ಈಗಾಗಲೇ ತಮಗೆ ವಹಿಸಿದ್ದ ಸಮೀಕ್ಷೆ ಕೆಲಸವನ್ನು ಶೇ 100ರಷ್ಟು ಮಾಡಿ ಮುಗಿಸಿದ್ದಾರೆ’ ಎಂದು ಹೇಳಿದರು.

‘ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ರಟ್ಟೀಹಳ್ಳಿ, ಸವಣೂರು, ಶಿಗ್ಗಾವಿ ತಾಲ್ಲೂಕಿನಲ್ಲಿ ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಬ್ಯಾಡಗಿ ಜಿಲ್ಲೆಯಲ್ಲಿ ವಿದ್ಯುತ್ ಮೀಟರ್ ಆಧರಿಸಿ 34,718 ಮನೆಗಳನ್ನು ಗುರುತಿಸಲಾಗಿತ್ತು. ಆದರೆ, ಈ ತಾಲ್ಲೂಕಿನಲ್ಲಿ 36,321 ಮನೆಗಳ ಸಮೀಕ್ಷೆ ಆಗಿದೆ. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮನೆಗಳ ಸಮೀಕ್ಷೆ ಆಗಿದೆ’ ಎಂದರು.

‘ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸಮೀಕ್ಷೆ ಗುರಿ ಸಾಧನೆಯಲ್ಲಿ ಹಾವೇರಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಚಾಮರಾಜನಗರ ಜಿಲ್ಲೆ (99.79) ಮೊದಲ ಸ್ಥಾನದಲ್ಲಿದೆ. ಸಮೀಕ್ಷೆ ಅವಧಿಯನ್ನು ಅ. 18ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಹಾವೇರಿ ಜಿಲ್ಲೆಯ ಸಮೀಕ್ಷೆದಾರರು, ಶೇ 100ರಷ್ಟು ಸಾಧನೆ ಮಾಡಲು ಸಮೀಕ್ಷೆ ಮುಂದುವರಿಸಿದ್ದಾರೆ’ ಎಂದು ಹೇಳಿದರು.

ಜನರು ವಾಸವಿರದ ಮನೆಗಳಿಗೆ ಸ್ಟಿಕ್ಕರ್: ‘ಜಿಲ್ಲೆಯ ಹಲವು ಕಡೆಗಳಲ್ಲಿ ಜನರು ವಾಸವಿರದ ಮನೆಗಳಿಗೆ ಹಾಗೂ ಬಾಡಿಗೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಇಂಥ ಮನೆಗಳ ಸಮೀಕ್ಷೆ ಹೇಗೆ ಮಾಡುವುದು? ಎಂಬ ಬಗ್ಗೆ ಅಧಿಕಾರಿಗಳ ಸಲಹೆ ಕೇಳಿದ್ದೇವೆ’ ಎಂದು ಸಮೀಕ್ಷೆದಾರರೊಬ್ಬರು ತಿಳಿಸಿದರು.

‘ನಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಎಲ್ಲ ಮನೆಗಳಿಗೂ ಭೇಟಿ ನೀಡಿದ್ದೇವೆ. ಆದರೆ, ಶೇ 100ರಷ್ಟು ಸಾಧನೆ ಮಾಡಲು ಹಲವು ಅಡ್ಡಿಗಳು ಎದುರಾಗಿವೆ. ಜನರು ವಾಸವಿರದ ಕಡೆ ಸ್ಟಿಕ್ಕರ್ ಅಂಟಿಸಲಾಗಿದ್ದು, ಈ ಮನೆಯ ಸಮೀಕ್ಷೆ ಮಾಡಿಲ್ಲ. ಸಮೀಕ್ಷೆ ಮಾಡಿಲ್ಲವೆಂದೇ ಆ್ಯಪ್ನಲ್ಲಿ ತೋರಿಸುತ್ತಿದೆ. ಆದರೆ, ಮನೆಯಲ್ಲಿ ಯಾರೂ ಇಲ್ಲವೆಂಬುದನ್ನು ದಾಖಲಿಸಲು ಆ್ಯಪ್ನಲ್ಲಿ ಅವಕಾಶವಿಲ್ಲ’ ಎಂದು ಹೇಳಿದರು.

ಸಮೀಕ್ಷೆ: ಸಹಾಯವಾಣಿ ಆರಂಭ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಪಟ್ಟಂತೆ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ಹೊಸದಾಗಿ ಸಮೀಕ್ಷೆ ಮಾಡಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಾಯವಾಣಿ ಆರಂಭಿಸಲಾಗಿದೆ. ‘ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ– 08375-249102 ಹಾವೇರಿ ತಹಶೀಲ್ದಾರ ಕಚೇರಿ– 9480370772 9663635166 ಬ್ಯಾಡಗಿ– 08375-228428 ಹಾನಗಲ್– 08379-262241 ಹಿರೇಕೆರೂರು– 08376-282231 ರಾಣೆಬೆನ್ನೂರು– 8618357292 ರಟ್ಟೀಹಳ್ಳಿ– 08376-200147 ಶಿಗ್ಗಾವಿ– 08378-255402 ಹಾಗೂ ಸವಣೂರು– 08378-241427 ಸಂಪರ್ಕಿಸಬಹುದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ‘ಯಾರಾದರೂ ಸಮೀಕ್ಷೆಯಿಂದ ವಂಚಿತರಾದರೆ ಸಮೀಕ್ಷೆದಾರರು ಮನೆ ಬಾರದಿದ್ದರೆ ಅಂಥವರು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಸಮೀಕ್ಷೆಯಿಂದ ದೂರವುಳಿದ ಜನರ ಅನುಕೂಲಕ್ಕಾಗಿ ಈ ಸಹಾಯವಾಣಿ ಕೆಲಸ ಮಾಡಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.