ನಮ್ಮ ಕ್ಲಿನಿಕ್ ಒಳಗಡೆ ಎಲ್ಲ ಸೌಲಭ್ಯವಿದ್ದರೂ ವೈದ್ಯರೇ ಇಲ್ಲ
ಗಂಗೇಬಾವಿ ಕೆ.ಎಸ್.ಆರ್.ಪಿ 10ನೇ ಪಡೆ ಕಚೇರಿ ಆವರಣದಲ್ಲಿ ಆರಂಭವಾದ ನಮ್ಮ ಕ್ಲಿನಿಕ್ ಆಸ್ಪತ್ರೆಗೆ ಇನ್ನೂ ಪೂರ್ಣಾವಧಿಗೆ ಯಾವ ವೈದ್ಯರು ನೇಮಕವಾಗಿಲ್ಲ. ಅಲ್ಲಿಯೂ ನಾವೇ ಹೋಗಬೇಕಾಗಿದೆ
ಡಾ.ಮಲ್ಲೇಶಪ್ಪ ಎಸ್.ಟಿ ನಮ್ಮಕ್ಲಿನಿಕ್ ಉಸ್ತುವಾರಿ ಶಿಗ್ಗಾವಿ
ಸರ್ಕಾರ ನಮ್ಮ ಕ್ಲಿನಿಕ್ ಆಸ್ಪತ್ರೆ ಆರಂಭ ಮಾಡುವ ಜತೆಗೆ ಸಿಬ್ಬಂದಿ ನೇಮಕಾತಿ ಮಾಡಬೇಕು. ಇಲ್ಲವಾದಲ್ಲಿ ಆಸ್ಪತ್ರೆ ತೆರೆಯಲು ಅನುಮತಿ ನೀಡಬಾರದು
ಫಕೀರಜ್ಜ ಗ್ರಾಮಸ್ಥ
‘ಪ್ರಚಾರಕ್ಕಾಗಿ ಶಾಸಕರಿಂದ ಉದ್ಘಾಟನೆ’
‘ನಮ್ಮ ಕ್ಲಿನಿಕ್’ ಮಾಡಬೇಕು ಎಂಬುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಕಟ್ಟಡ ನಿರ್ಮಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಪ್ರಚಾರಕ್ಕಾಗಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರಿಂದ ಕ್ಲಿನಿಕ್ ಉದ್ಘಾಟನೆ ಮಾಡಿಸಿ ಮೌನವಾಗಿದ್ದಾರೆ’ ಎಂದು ಜನರು ದೂರುತ್ತಿದ್ದಾರೆ. ‘ಕಾಯಂ ವೈದ್ಯರಿಲ್ಲವೆಂಬುದು ಗೊತ್ತಿದ್ದರೂ ಶಾಸಕ ಪಠಾಣ, ಕ್ಲಿನಿಕ್ ಉದ್ಘಾಟಿಸಿ ಭಾಷಣ ಮಾಡಿ ಹೋದರು. ಕ್ಲಿನಿಕ್ ಹೇಗೆ ನಡೆಯುತ್ತಿದೆ ? ಎಂಬುದನ್ನು ಪರಿಶೀಲಿಸಿಲ್ಲ. ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡಿದರೆ ಏನು ಪ್ರಯೋಜನ. ಜನಪರ ಕಾಳಜಿ ಇದ್ದರೆ, ಕೂಡಲೇ ವೈದ್ಯರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.