ಶಿಗ್ಗಾವಿ: ಇಲ್ಲಿಯ ಗಂಗಿಭಾವಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಡಿಪೊದ ಉದ್ಘಾಟನಾ ಸಮಾರಂಭವು ಡಿ. 12ರಂದು ನಡೆಯಲಿದೆ. ಹಲವು ವರ್ಷಗಳಿಂದ ಡಿಪೊ ನಿರ್ಮಾಣಕ್ಕಾಗಿ ಕಾಯುತ್ತಿದ್ದ ಶಿಗ್ಗಾವಿ ಜನರ ಕನಸು ನನಸಾಗುತ್ತಿದೆ.

ಶಿಗ್ಗಾವಿ–ಸವಣೂರು ತಾಲ್ಲೂಕುಗಳನ್ನು ಒಳಗೊಂಡು ವಿಧಾನಸಭಾ ಕ್ಷೇತ್ರ ರಚಿಸಲಾಗಿದೆ. ಆದರೆ, ಸವಣೂರಿನಲ್ಲಿ ಮಾತ್ರ ಸ್ವತಂತ್ರ ಡಿಪೊವಿದೆ. ಇದೇ ಡಿಪೊದಿಂದ ಶಿಗ್ಗಾವಿ ಪಟ್ಟಣ ಹಾಗೂ ತಾಲ್ಲೂಕಿನ ಹಳ್ಳಿಗಳಿಗೆ ಬಸ್ಗಳು ಸಂಚರಿಸುತ್ತಿವೆ. ಇದರಿಂದಾಗಿ ಶಿಗ್ಗಾವಿ ತಾಲ್ಲೂಕಿನಲ್ಲಿ ಬಸ್ಗಳ ನಿರ್ವಹಣೆಗೆ ಸಮಸ್ಯೆ ಉಂಟಾಗುತ್ತಿದೆ.

ಜನರ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಮಿಸಿದ್ದ ಡಿಪೊ, ಉದ್ಘಾಟನೆಯಾಗದೇ ಹಲವು ವರ್ಷವಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಉದ್ಘಾಟನೆ ಆಗದ ಡಿಪೊ: ತಪ್ಪದ ಯಾತನೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. ಇದೀಗ ಡಿಪೊ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ.
.ಶಿಗ್ಗಾವಿ | ಉದ್ಘಾಟನೆ ಆಗದ ಡಿಪೊ: ತಪ್ಪದ ಯಾತನೆ.
‘ಶಿಗ್ಗಾವಿಯಲ್ಲಿ ನಿರ್ಮಿಸಿರುವ ನೂತನ ಬಸ್ ಡಿಪೊ, ಚಾಲನಾ ಮತ್ತು ಮೆಕ್ಯಾನಿಕ್ ತರಬೇತಿ ಕೇಂದ್ರ ಉದ್ಘಾಟನೆಯು ಡಿ. 12ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಾಕರಸಾಸಂ ಅಧ್ಯಕ್ಷ ಭರಮಗೌಡ ಕಾಗೆ, ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಭಾಗವಹಿಸಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚುವರಿ ಬಸ್ಗಳ ಲಭ್ಯತೆ:

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಶಿಗ್ಗಾವಿ ತಾಲ್ಲೂಕಿನಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಸ್ವತಂತ್ರ್ಯ ಡಿಪೊ ಇಲ್ಲದಿದ್ದರಿಂದ, ಬಸ್ಗಳ ಕೊರತೆ ಉಂಟಾಗುತ್ತಿದೆ.

‘ಸವಣೂರು ಬಸ್ ಡಿಪೊದಲ್ಲಿ ಸದ್ಯಕ್ಕೆ 59 ಬಸ್ಗಳಿವೆ. ಶಿಗ್ಗಾವಿ, ಸವಣೂರು ತಾಲ್ಲೂಕಿನ ಹಳ್ಳಿಗಳು ಹಾಗೂ ಹೊರ ಜಿಲ್ಲೆ, ಹೊರ ರಾಜ್ಯಗಳ 52 ಮಾರ್ಗಗಳಲ್ಲಿ ಬಸ್ ಸಂಚರಿಸುತ್ತಿವೆ. ಬೇರೆ ತಾಲ್ಲೂಕಿನಲ್ಲಿ ಪ್ರತ್ಯೇಕ ಡಿಪೊಗಳಿದ್ದು, ಅಲ್ಲಿಯ ಬಸ್ಗಳು ಆಯಾ ತಾಲ್ಲೂಕಿನಲ್ಲಿ ಮಾತ್ರ ಸಂಚರಿಸುತ್ತವೆ. ಆದರೆ, ಸವಣೂರು ಡಿಪೊದ ಬಸ್ಗಳು ಶಿಗ್ಗಾವಿ ತಾಲ್ಲೂಕಿನಲ್ಲಿ ಸಂಚರಿಸುತ್ತಿವೆ. ಎರಡೂ ತಾಲ್ಲೂಕಿಗೆ ಹೆಚ್ಚಿನ ಬಸ್ಗಳು ಬೇಕು. ಆದರೆ, ಒಂದೇ ಡಿಪೊ ಇರುವುದರಿಂದ ಎರಡೂ ತಾಲ್ಲೂಕಿಗೂ ಬೇಡಿಕೆಯಷ್ಟು ಬಸ್ ನೀಡಲು ಆಗುತ್ತಿಲ್ಲ. ಹೊಸ ಡಿಪೊ ಕಾರ್ಯಾಚರಣೆ ಶುರುವಾದರೆ, ಹೆಚ್ಚುವರಿ ಬಸ್ಗಳು ಸಿಗಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.