ಹಾವೇರಿ: ‘ಉತ್ತಮ ಶಿಕ್ಷಣದ ಮೂಲಕ ಮಕ್ಕಳನ್ನು ಸಮಾಜದ ಗಣ್ಯ ವ್ಯಕ್ತಿಗಳಾಗಿ ಮಾಡಿದ ಶಿಕ್ಷಕರು, ಯಾವುದೇ ಪ್ರಶಸ್ತಿ–ಪುರಸ್ಕಾರ ಸಿಗದೇ ಅಳುತ್ತ ನಿವೃತ್ತರಾಗುತ್ತಿದ್ದಾರೆ. ಕೆಲ ಶಿಕ್ಷಕರು, ಶಾಸಕರು–ರಾಜಕಾರಣಿಗಳಿಂದ ಒತ್ತಡ ಹಾಕಿಸಿ ಲಾಬಿ–ವಸೂಲಿ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಬೇಸರ ವ್ಯಕ್ತಪಡಿಸಿದರು.

ಇಲ್ಲಿಯ ಜಿಲ್ಲಾ ಗುರುಭವನದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮ ದಿನೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಶಿಕ್ಷಣ ಇಲಾಖೆಗೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರೆ ಅಧಿಕಾರಿಗಳಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳು ಹೇಗಿವೆ ? ಶಿಕ್ಷಕರು ಹೇಗಿದ್ದಾರೆ? ಎಂಬುದು ಅವರಿಗೆ ಗೊತ್ತಿರುತ್ತದೆ. ಹೀಗಿರುವಾಗ, ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಕರೆಯುವುದು ಸರಿಯಲ್ಲ. ಅರ್ಜಿ ಹಾಕಿ ಪ್ರಶಸ್ತಿ ಸಿಗುವುದಾದರೆ, ಆ ಪ್ರಶಸ್ತಿಗೆ ಗೌರವ ಸಿಗುವುದಿಲ್ಲ’ ಎಂದರು.

‘ಪ್ರಶಸ್ತಿ ಬಗ್ಗೆ ಹಲವು ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. ನನಗೂ ಪತ್ರ ಬರೆದಿದ್ದಾರೆ. ಅರ್ಜಿ ಕರೆದು ಪ್ರಶಸ್ತಿ ನೀಡಲು ನಾಚಿಕೆಯಾಗಬೇಕು. ಅರ್ಜಿ ಹಾಕಿದ ಬಹುತೇಕ ಶಿಕ್ಷಕರು, ಶಾಸಕರು ಹಾಗೂ ರಾಜಕಾರಣಿಗಳ ವಸೂಲಿ ಹಚ್ಚುತ್ತಿದ್ದಾರೆ. ಲಂಚ ಕೊಟ್ಟು ಶಾಸಕರಿಂದ ಹೇಳಿಸಿ ಪ್ರಶಸ್ತಿ ಪಡೆಯುವುದು ಶಿಕ್ಷಣ ಕ್ಷೇತ್ರಕ್ಕೆ ಶೋಭೆಯಲ್ಲ. ಶ್ರೀಮಂತರಿಗೆ, ಶಾಸಕರ ಬೀಗರಿಗೆ ಪ್ರಶಸ್ತಿ ನೀಡುವುದೂ ಸರಿಯಲ್ಲ. ಮುಂದಿನ ವರ್ಷವಾದರೂ ಅರ್ಜಿ ಕರೆಯದೇ ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು’ ಎಂದು ಹೇಳಿದರು.

‘ಶಿಕ್ಷಕರ ಬಗ್ಗೆ ಅಪಾರ ಗೌರವವಿದೆ. ಆದರೆ, ಈಗ ಶಿಕ್ಷಕರಿಂದಲೇ ಶಾಲೆಗಳು ಬಹಳಷ್ಟು ಹದಗೆಟ್ಟಿವೆ. ಶಿಕ್ಷಕರೆಂದರೆ, ದಿನವೂ ಓದಬೇಕು. ಏಕೆಂದರೆ, ಇಂದಿನ ಮಕ್ಕಳು ಶಿಕ್ಷಕರಿಗಿಂತ ಹೆಚ್ಚು ಜಾಣರಿದ್ದಾರೆ’ ಎಂದರು.

‘ನಾನೂ ಜಿ.ಪಂ. ಸದಸ್ಯನಿದ್ದಾಗ, ಸಂಸ್ಥೆ ಮೂಲಕ ಶಾಲೆ ಆರಂಭಿಸಿದೆ. ಅನುದಾನ ಪಡೆಯಲು ಸಾಕಷ್ಟು ವರ್ಷ ಬೇಕಾಯಿತು. ಅನುದಾನವೂ ಬೇಗ ಸಿಗಲಿಲ್ಲ. ಆಗ, ಶಿಕ್ಷಕರಿಗೆ ಕನ್ಯೆ ನೋಡಲು ನಾನೇ ಹೋಗಿದ್ದೆ. ನಮ್ಮ ಶಾಲೆಗೆ ಅನುದಾನ ಬರುತ್ತದೆ. ಶಿಕ್ಷಕರಿಗೆ ಕೈ ತುಂಬ ಸಂಬಳ ಸಿಗುವುದಾಗಿ ಹೇಳಿ, ಮದುವೆ ಮಾಡಿಸಿದೆ. ನಮ್ಮದು ಕನ್ನಡ ಶಾಲೆ. ಮಕ್ಕಳು ಬಡವರು. ಇಂಥ ಶಾಲೆಯನ್ನು ನಡೆಸಿಕೊಂಡು ಹೋಗುವುದರಲ್ಲಿ ಸಾಕಾಗಿದೆ. ಗೋವಿನ ಜೋಳ ಮಾರಿದ ಹಣವನ್ನೂ ಶಾಲೆಗೆ ಹಾಕಿದ್ದೇನೆ. ಇಂದಿನ ಶಿಕ್ಷಕರಿಂದ, ಕಲಿಕೆಯ ಜೊತೆಯಲ್ಲಿ ಬೇರೆ ಬೇರೆ ಕೆಲಸ ಮಾಡಿಸಲಾಗುತ್ತಿದೆ. ಚುನಾವಣೆ, ಹುಟ್ಟಿದವರು–ಸತ್ತವರ ದಾಖಲಾತಿ, ತತ್ತಿ, ಬಾಳೆಹಣ್ಣು, ಬಿಸಯೂಟ ಎಲ್ಲದ್ದಕ್ಕೂ ಶಿಕ್ಷಕರನ್ನ ಬಳಸಿಕೊಳ್ಳಲಾಗುತ್ತಿದೆ. ಶಿಕ್ಷಕರ ಕೊರೆತೆಯೂ ಬಹಳಷ್ಟು ಕಾಡುತ್ತಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಲ್. ನಾಗರಾಜ್ ಮಾತನಾಡಿ, ‘ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗಬೇಕು. ಶಿಕ್ಷಕರ ಕಲಿಕಾ ಮಟ್ಟದ ಮೇಲೆ ವಿದ್ಯಾರ್ಥಿಗಳ ಕಲಿಕೆ ಅವಲಂಬಿತವಾಗಿರುತ್ತದೆ. ಶಿಕ್ಷಕರು ಸಮಯ ಪಾಲನೆ ಮಾಡಬೇಕು. ಇಂದಿನ ಮಕ್ಕಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಮೌಲ್ಯ ಆಧರಿತ ಶಿಕ್ಷಣದ ಅವಶ್ಯಕತೆ ಇದೆ’ ಎಂದರು.

ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ 23 ಶಿಕ್ಷಕರಿಗೆ 2025–26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಶ್ರೀಶೈಲ ಶಾಖಾಮಠ ಹರಸೂರ ಬಣ್ಣದಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ, ಡಯಟ್ ಉಪನಿರ್ದೇಶಕ ಜೆಡ್.ಎಂ. ಖಾಜಿ ಇದ್ದರು.

‘ಒಬ್ಬನಿಂದ 162 ಅರ್ಜಿ; ಶಿಕ್ಷಕರಿಗೆ ಕಿರುಕುಳ’

‘ಶಾಲೆಗಳ ಶಿಕ್ಷಕರನ್ನು ಬೆದರಿಸಿ ಹಣ ವಸೂಲಿ ಮಾಡಲು ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಮಂಟಗಣಿಯ ಮಾರುತಿ ರಾಮಪ್ಪ ಬಣಕಾರ ಎಂಬಾತ ಒಬ್ಬನೇ ಕಾಯ್ದೆಯಡಿ 162 ಅರ್ಜಿಗಳನ್ನು ಹಾಕಿದ್ದಾನೆ. ಶಿಕ್ಷಕರಿಗೂ ಕಿರುಕುಳ ನೀಡುತ್ತಿದ್ದಾನೆ. ಈತನ ವಿರುದ್ಧ ಜಿಲ್ಲಾಧಿಕಾರಿ ಉಪನಿರ್ದೇಶಕರಿಗೆ ದೂರು ನೀಡುತ್ತಿದ್ದೇನೆ’ ಎಂದು ಎಸ್.ಎಫ್.ಎನ್. ಗಾಜೀಗೌಡ್ರ ತಿಳಿಸಿದರು. ‘ಅನುದಾನ ಪಡೆದ ಶಾಲೆಗಳನ್ನು ಗುರಿಯಾಗಿಸಿಕೊಂಡು ಮಾರುತಿ ಬಣಕಾರ ಅರ್ಜಿ ಹಾಕುತ್ತಿದ್ದಾನೆ. ಚಕ್ಕಿ ಬಾಳೆಹಣ್ಣು ಇತರೆ ವಿಷಯಗಳ ಲೆಕ್ಕ ಕೇಳುವ ಈತನ ಕಿರುಕುಳದಿಂದ ಬೇಸತ್ತು ಕೆಲ ಶಿಕ್ಷಕರು ₹ 5 ಸಾವಿರದಿಂದ ₹ 10 ಸಾವಿರ ಕೊಟ್ಟಿದ್ದಾರೆ. ಈಗ ಈತನ ಉಪಟಳ ಹೆಚ್ಚಾಗಿದ್ದು ಎಲ್ಲ ಶಿಕ್ಷಕರು ಬಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ಈತನ ವಿರುದ್ಧ ಕ್ರಮ ಆಗುವವರೆಗೂ ನಾನು ಬಿಡುವುದಿಲ್ಲ. ಶಿಕ್ಷಣ ಸಚಿವರನ್ನೂ ಭೇಟಿಯಾಗುವೆ’ ಎಂದು ಹೇಳಿದರು.

‘ವಸತಿ ಶಾಲೆ: ಸಮಯ ಪರಿಷ್ಕರಿಸಿ’

‘ನವೋದಯ, ಮೊರಾರ್ಜಿ ಹಾಗೂ ಇತರೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯನ್ನು ನವೆಂಬರ್– ಡಿಸೆಂಬರ್ನಲ್ಲಿ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಪೂರ್ಣಗೊಂಡಿರುವುದಿಲ್ಲ. ಇದರಿಂದ ಸರ್ಕಾರಿ ಶಾಲೆ ಮಕ್ಕಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ ಮೊದಲ ವಾರ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಹಾಗೂ ಉಪನಿರ್ದೇಶಕರ ಮೂಲಕ ರಾಜ್ಯ ಸರ್ಕಾರಕ್ಕೆ ಶಿಕ್ಷಕರು ಮನವಿ ಸಲ್ಲಿಸಿದರು.

‘ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಕೆಲಸದ ಒತ್ತಡ ಹೆಚ್ಚಿದ್ದು, ಅದನ್ನು ಕಡಿಮೆ ಮಾಡಬೇಕು. ಡಿ ದರ್ಜೆ ನೌಕರ ಹಾಗೂ ಕ್ಲರ್ಕ್ ಒದಗಿಸಬೇಕು. ಮುಖ್ಯ ಶಿಕ್ಷಕರು ರಜೆ ಅವಧಿಯಲ್ಲೂ ಕೆಲಸ ಮಾಡುತ್ತಿದ್ದಾರೆ. ಅವರನ್ನು ರಜಾ ರಹಿತ ನೌಕರರೆಂದು ಘೋಷಿಸಿ ಅದರ ಸೌಲಭ್ಯಗಳನ್ನು ನೀಡಬೇಕು. ಆನ್ಲೈನ್ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.