ರಾಣೆಬೆನ್ನೂರು: ಇಲ್ಲಿನ ಅಶೋಕ ನಗರ ಠಾಣೆಯ ಪೊಲೀಸ್ ಠಾಣೆಯ ಎದುರು ಜಗದೀಶ ಅಂಕಲಕೋಟೆ ಅವರ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿರಾಟ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆಯು ಸೆ. 29 ರಂದು ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ಗಜಾನನ ಮೂರ್ತಿಯ ಮೇಲಿರುವ ಆಭರಣಗಳ ಹರಾಜು, ನಂತರ ವಿಸರ್ಜನೆಯ ಬೃಹತ್ ಶೋಭಾಯಾತ್ರೆಯು ಆರಂಭವಾಗುವುದು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಡಿಜೆ ಸೌಲಭ್ಯ ಕಲ್ಪಿಸಲಾಗಿದೆ.
ಯಾತ್ರೆಯು ಅಶೋಕ ವೃತ್ತದಿಂದ ಆರಂಭಗೊಂಡು ಅಂಚೆ ವೃತ್ತ, ಸಂಗಮ ವೃತ್ತ, ರಂಗನಾಥ ನಗರ, ದೊಡ್ಡಪೇಟೆ ರಸ್ತೆ, ಚೌಕಮುಖಿ ವೃತ್ತ, ಎಂ.ಜಿ. ರಸ್ತೆ, ದುರ್ಗಾ ವೃತ್ತ, ಕುರುಬಗೆರಿ ಕ್ರಾಸ್, ಹಳೇ ಪಿ.ಬಿ ರಸ್ತೆಯ ಮೂಲಕ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.