ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ|ರೈಲು ಅಪಘಾತ: ಸೂಕ್ತ ತನಿಖೆಗೆ ಆಗ್ರಹ

Published 4 ಜೂನ್ 2023, 16:07 IST
Last Updated 4 ಜೂನ್ 2023, 16:07 IST
ಅಕ್ಷರ ಗಾತ್ರ

ಕಲಬುರಗಿ: ‘ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ನಡೆದ ರೈಲು ಅಪಘಾತದ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ (ಎಐಡಿವೈಒ) ಜಿಲ್ಲಾ ಸಮಿತಿ ಅಧ್ಯಕ್ಷ ಜಗನ್ನಾಥ ಎಸ್‌.ಎಚ್‌. ಒತ್ತಾಯಿಸಿದರು.

ಜಿಲ್ಲೆಯ ಶಹಾಬಾದ್ ನಗರದ ರೈಲು ನಿಲ್ದಾಣದ ಎದುರು ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದರು.

ಇದನ್ನು ಶತಮಾನದ ಅತ್ಯಂತ ಭೀಕರ ಅಪಘಾತ ಎಂದು ಪರಿಗಣಿಸಲಾಗಿದೆ. ರೈಲು ಹಳಿ ನಿರ್ವಹಿಸುವ ಅಧಿಕಾರಿಗಳು ಹೆಚ್ಚು ಕಾರ್ಯತತ್ಪರತೆ ಮತ್ತು ಜಾಗರೂಕತೆ ವಹಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಸಾವುಗಳು ಹೆಚ್ಚಾಗುವ ನಿರೀಕ್ಷೆ ಇದೆ. ವಲಸೆ ಕಾರ್ಮಿಕರು ಮತ್ತು ಸಮಾಜದ ಬಡ ವರ್ಗದ ಪ್ರಯಾಣಿಕರು ತುಂಬಿದ ಕಾಯ್ದಿರಿಸದ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಜನರು ಗುರುತಿಸಲ್ಪಟ್ಟಿಲ್ಲ ಮತ್ತು ಅವರು ಲೆಕ್ಕಕ್ಕೆ ಸಿಗುವುದಿಲ್ಲ ಎಂಬುದು ಆತಂಕಕಾರಿ ವಿಷಯವಾಗಿದೆ. ಎಐಡಿವೈಒ ಒಡಿಶಾ ಸಮಿತಿ ಸ್ಥಳದಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿದೆ ಎಂದರು.

ಘಟನೆ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು. ಅಪಘಾತಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು. ಮೃತರ ಕುಟುಂಬದವರಿಗೆ ಸಮರ್ಪಕ ಪರಿಹಾರ ನೀಡುವುದರ ಜತೆಗೆ ಗಾಯಾಳುಗಳಿಗೆ ಸಂಪೂರ್ಣ ಜವಾಬ್ದಾರಿಯೊಂದಿಗೆ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

ರಾಘವೇಂದ್ರ.ಎಂ.ಜಿ, ರಾಜೇಂದ್ರ ಅತನೂರ, ರಘು ಪವಾರ್, ತೇಜಸ್ ಇಂಬ್ರಾಹಿಂಪುರ, ಆನಂದ ದಂಡಗುಲಕರ್, ಶ್ರೀನಿವಾಸ್ ದಂಡಗುಲಕರ್, ರಾಕೇಶ ಹಾಗೂ ಇತರರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT