ಕಲಬುರಗಿ: ‘ಬೋಡೆ ರಿಯಾಜ್ ಅಹ್ಮದ್ ಅವರು ಅಮೀರ್ ಖುಸ್ರೋ ಕಾವ್ಯ ಲೋಕವನ್ನು ಅನುವಾದಗೊಳಿಸಿ ವರ್ತಮಾನದಲ್ಲಿ ಮತ್ತೆ ಅಮೀರ್ ಖುಸ್ರೋನನ್ನು ಓದುವ ಹಸಿವನ್ನು ಹೆಚ್ಚಿಸಿದ್ದಾರೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ವಿಭಾಗದ ಡೀನ್ ಪ್ರೊ. ಅಬ್ದುಲ್ ರಬ್ ಉಸ್ತಾದ್ ಹೇಳಿದರು.

ಗುಲಬರ್ಗಾ ವಿಶ್ವ ವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಬುಧವಾರ ನಡೆದ ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರ ಅವರ ಅಮೀರ ಖುಸ್ರೋ ಕಾವ್ಯಲೋಕ ಅನುವಾದಿತ ಕೃತಿ ಸಂವಾದ ಕಾರ್ಯಕ್ರಮದಲ್ಲಿ ‘ಅಮೀರ್ ಖುಸ್ರೋ ಕಾವ್ಯಲೋಕ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಯಾವುದೋ ಒಂದು ಭಾಷೆ ಕಾವ್ಯವನ್ನು ಇನ್ನೊಂದು ಭಾಷೆ ಅನುವಾದಿಸುವುದು ಚಾರಿತ್ರಿಕ ಗ್ರಂಥ ಅನುವಾದಷ್ಟು ಸುಲಭಸಾಧ್ಯವಲ್ಲ. ಮೂಲ ಲೇಖಕನ ಭಾವಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಕಾವ್ಯವನ್ನು ಅನುವಾದಿಸಿಬೇಕಾಗುತ್ತದೆ. ಉರ್ದು ಭಾಷೆಯ ಮೊದಲ ಗಜಲ್ ರಚಿಸಿದವರು ಅಮೀರ್ ಖುಸ್ರೋ, ಅದನ್ನು ಬೋಡೆಯವರು ಇಲ್ಲಿ ಅನುವಾದಿಸಿದ್ದಾರೆ. ಪ್ರಸ್ತುತ ಪಾರ್ಸಿ ಭಾಷೆಯನ್ನು ಓದುವುದು, ಅರ್ಥೈಸಿಕೊಳ್ಳುವುದೇ ಕಷ್ಟದ ಕೆಲಸವಾಗಿರುವಾಗ ಅದನ್ನು ಕನ್ನಡಕ್ಕೆ ಅನುವಾದಿಸುವುದು ಇನ್ನಷ್ಟು ಕಠಿಣವಾದ ಕೆಲಸವೆನಿಸುತ್ತದೆ. ಬೋಡೆಯವರು ಅದನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ’ ಎಂದರು.

ಪುಸ್ತಕ ಪರಿಚಯಗೊಳಿಸುತ್ತ ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಡೀನ್ ಪ್ರೊ.ವಿಕ್ರಮ ವಿಸಾಜೆ, ‘ಬೋಡೆ ರಿಯಾಜ್ ಅವರು ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಅವರು ಸಾಹಿತ್ಯವನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ರೂಮಿ ಕಾವ್ಯವನ್ನು ಅನುವಾದಿಸಿದ್ದಾರೆ. ಪ್ರಸ್ತುತ ಫಾರೂಖಿಯವರ ಕಾದಂಬರಿ ಅನುವಾದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ’ ಎಂದರು.

‘ಕನ್ನಡ ಸಾಹಿತ್ಯ ಲೋಕ ಈವರೆಗೂ ಉರ್ದು, ಪಾರ್ಸಿ, ಅರೆಬಿಕ್ ಸಾಹಿತ್ಯ ಲೋಕದ ಅನುಭವವನ್ನು ಒಗ್ಗಿಸಿಕೊಳ್ಳುವ ಕೆಲಸ ಆಗಿರಲಿಲ್ಲ. ಈಗ ಆ ಅಪರಿಚಿತ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸವನ್ನು ಬೋಡೆ ಮಾಡಿದ್ದಾರೆ. ಮೂಲಕ್ಕೆ ಹೆಚ್ಚು ಹತ್ತಿರದಲ್ಲಿ ಅನುವಾದ ಮಾಡುವುದನ್ನು ನಾವು ಕೈಬಿಡಬೇಕು. ಯಾವ ಅನುವಾದ ಕನ್ನಡದ ಯಾವ ಅನುಭವ ಲೋಕಕ್ಕೆ ಒಗ್ಗಿಕೊಳ್ಳುತ್ತದೆ ಎಂಬ ಅರಿವು ಅನುವಾದಕನಿಗಿರಬೇಕು’ ಎಂದರು.

‘ಅಮೀರ್ ಖುಸ್ರೋ ಬಗ್ಗೆ ಕನ್ನಡದಲ್ಲಿ ಬಂದ ಅತಿದೊಡ್ಡ ಪುಸ್ತಕ ಇದು. ನಮಗಿಂತ ಎಷ್ಟೋ ಶತಮಾನಗಳ ಕಾಲ ಹಳೆಯ ಕವಿಯನ್ನು ನಾವು ಕನ್ನಡದಲ್ಲಿ ಓದಲು ಕಲಬುರಗಿಯ ಬೋಡೆ ರಿಯಾಜ್ ಅಹ್ಮದ್ ಅವರು ಬರಬೇಕಾಯಿತು’ ಎಂದರು.

ಪರವಿನ್ ಸುಲ್ತಾನಾ ಮಾತನಾಡಿದರು. ಪ್ರಕಾಶ ಸಂಗಮ ನಿರೂಪಿಸಿದರು, ಶಿವಶರಣಪ್ಪ ಕೊಡ್ಲಿ ಸ್ವಾಗತಿಸಿದರು. ಅಪ್ಪಾರಾವ ಅಕ್ಕೋಣಿ, ಪಿ.ನಂದಪ್ಪ, ಡಿ.ನದಾಫ್, ಸೂರ್ಯಕಾಂತ ಸುಜ್ಯಾತ್, ಹಣಮಂತ ಮೇಲಕೇರಿ, ಕನ್ನಡ ವಿಭಾಗದ ಉಪನ್ಯಾಸಕರು ಭಾಗವಹಿಸಿದ್ದರು.

‘ಅನುಭಾವಿಕ ಸಾಹಿತ್ಯ ಭಾಷೆಗಳಿಗೂ ಶಿವದಾರ–ಜನಿವಾರ’ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ‘ಕಲ್ಯಾಣ ಕರ್ನಾಟಕದಲ್ಲಿ ವಚನ ಸೂಫಿ ತತ್ವಪದಗಳ ಕುರಿತು ಎಂ.ಎಂ. ಕಲಬುರ್ಗಿ ಅವರ ಮಾದರಿಯಲ್ಲಿ ಕೆಲಸ ಮಾಡಿಸುವ ಮನಸ್ಸುಗಳ ಕೊರತೆ ಇದೆ. ಬೋಡೆ ಅವರು ಅದನ್ನು ಸ್ವಲ್ಪ ಪ್ರಮಾಣದಲ್ಲಿ ನೀಗಿಸುವ ಕೆಲಸವನ್ನು ಅನುವಾದದ ಮೂಲಕ ಮಾಡುತ್ತಿದ್ದಾರೆ’ ಎಂದರು. ‘ನಮ್ಮಲ್ಲಿಯ ಅನುಭಾವಿಕ ಸಾಹಿತ್ಯ ಮತ್ತು ಭಾಷೆಗಳಿಗೂ ಶಿವದಾರ ಮತ್ತು ಜನಿವಾರ ಹಾಕಿದವರು ನಾವು. ಭಾರತಕ್ಕೆ ಬರುವ ಯಾವುದೇ ವಾದಗಳಿಗೂ ಈ ತಾಪತ್ರಯ ತಪ್ಪಿದ್ದಲ್ಲ. ಸಂವಿಧಾನ ರಾಷ್ಟ್ರೀಯ ಧ್ವಜಗಳು ನಮಗೆ ಪ್ರಿಯವಾಗಬೇಕು. ಆದರೆ ದಂಡ ದೊಣ್ಣೆಗಳು ಪ್ರಿಯವಾಗುತ್ತಿರುವುದು ದುರಂತ. ನಮ್ಮಲ್ಲಿ ಪ್ರೀತಿ ಇದೆ ಆದರೆ ಅದನ್ನು ಹಂಚುವವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಖುಸ್ರೋ ಶಾಹು ಮಹಾರಾಜ ಅಂಬೇಡ್ಕರ್ ಅಂಥವರ ಚಿಂತನೆಗಳು ಪುನರ್ ಮನನ ಮಾಡಿಕೊಳ್ಳುವ ಅಗತ್ಯ ವರ್ತಮಾನದ ಸಮಾಜಕ್ಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.