ಶುಕ್ರವಾರ, ಮೇ 27, 2022
23 °C

ಆಧ್ಯಾತ್ಮಿಕ ಜ್ಞಾನದಿಂದ ನೆಮ್ಮದಿ: ವೈಷ್ಣವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಸಂಕಟಗಳಿಂದ ನೆಮ್ಮದಿ ಹೊಂದಲು ಆಧ್ಯಾತ್ಮಿಕ ಜ್ಞಾನವು ಅಗತ್ಯ ವಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರ ವಿದ್ಯಾಲಯದ ವೈಷ್ಣವಿ ತಿಳಿಸಿದರು.

ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ರಾಜಯೋಗ ಆಧ್ಯಾತ್ಮಿಕ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಪಂಚದ ಹಲವು ಪಟ್ಟಣಗಳಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯಗಳ ಕೇಂದ್ರಗಳಿವೆ. ಯಾವುದೇ ಜಾತಿ, ಮತ, ಧರ್ಮ ಮತ್ತು ಭಾಷೆಗಳಿಗೆ ಸೀಮತವಾಗದೇ ಸಕಲ ಮನುಷ್ಯ ಕಲ್ಯಾಣ ಬಯಸುವುದು ಕೇಂದ್ರದ ಮುಖ್ಯ ಆಶಯವಾಗಿದೆ ಎಂದರು. ಮಾದನ ಹಿಪ್ಪರಗಿಯ ಕೇಂದ್ರದ ಸಂಯೋಜಕಿ ಪಾರ್ವತಿ ಗುಂಡರಗಿ, ಪ್ರಮುಖರಾದ ಈರಮ್ಮ ದುರ್ಗದ, ಮಹಾನಂದ ಮೇತ್ರೆ, ಮಹಾದೇವಿ ಪಾತಾಳೆ, ರತ್ನಾಬಾಯಿ ಜುಂಜಾ, ಧಾನಮ್ಮ ಗುಳಗಿ, ಕಲಾವತಿ ಸಿಂಗಶೆಟ್ಟಿ, ರೇಖಾ ತೋಳನೂರೆ, ಮಹಾದೇವಿ ಅಮ್ಮಾಣೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು