ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರವಾದ ಯೋಜನೆಗಳನ್ನು ಮರಳಿ ತನ್ನಿ: ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ

Last Updated 5 ಅಕ್ಟೋಬರ್ 2021, 4:44 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಗೆ ಮಂಜೂರಾಗಿದ್ದ ಪ್ರಮುಖ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇರೆಡೆ ಸ್ಥಳಾಂತರಿಸಿವೆ. ಅವೆಲ್ಲವನ್ನೂ ಮರಳಿ ಜಿಲ್ಲೆಗೇ ಮಂಜೂರು ಮಾಡಿಸಬೇಕು ಎಂದು ಕಲ್ಯಾಣ ನಾಡು ವಿಕಾಸ ವೇದಿಕೆ ಮುಖಂಡರು, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ತಮ್ಮ ಹಿಂದಿನ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ ಹಲವು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದ್ದೇಶ ಪೂರ್ವಕವಾಗಿ ಸ್ಥಳಾಂತರಿಸಿವೆ. 2014ರಲ್ಲಿ ಘೋಷಣೆಯಾಗಿದ್ದ ರೈಲ್ವೆ ವಿಭಾಗೀಯ ಕಚೇರಿಯನ್ನು ನೆಪಹೇಳಿ ರದ್ದು ಮಾಡಲಾಗಿದೆ. ಇಎಸ್‌ಐ ಆಸ್ಪತ್ರೆಯನ್ನು ‘ಏಮ್ಸ್‌’ ಆಗಿ ಮಾಡುವ ಬೇಡಿಕೆಯೂ ಈಡೇರಿಲ್ಲ. ಅದನ್ನು ಹುಬ್ಬಳ್ಳಿಗೆ ನೀಡಲಾಯಿತು. ಜವಳಿ ಪಾರ್ಕ್‌, ತೊಗರಿ ಪಾರ್ಕ್‌, ಸೆಂಟರ್‌ ಆಫ್ ಎಕ್ಸಲೆನ್ಸ್‌ನಂತಹ ಮಹತ್ವದ ಯೋಜನೆಗಳು ಕೈಬಿಟ್ಟು ಹೋಗುತ್ತಿವೆ. ನಗರದ ಎರಡನೇ ವರ್ತುಳ ರಸ್ತೆ ಇನ್ನೂ ಆರಂಭವಾಗಿಲ್ಲ. ಇದರಿಂದ ಈ ಭಾಗದ ಪ್ರಗತಿಗೆ ಭಾರಿ ಪೆಟ್ಟು ಬಿದ್ದಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕರಗಳ ಮೇಲೆ ಒತ್ತಡ ಹೇರಿ ಈ ಎಲ್ಲ ಯೋಜನೆಗಳನ್ನೂ ಕಲಬುರ್ಗಿಗೇ ಮರಳಿ ತರಬೇಕು ಎಂದು ಕೋರಿದ್ದಾರೆ.

ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಬಾಬು ಮದನಕರ್, ಉಪಾಧ್ಯಕ್ಷರಾದ ಅನಿಲ ಕಪನೂರ, ಸಂಘಟಕರಾದ ಗೌತಮ್ ಕರಿಕಲ್, ಸಾಗರ ಪಾಟೀಲ, ಉದಯಕುಮಾರ ಡಿ.ಕೆ, ಮಹೇಶ ಪಾಟೀಲ, ಸೂರ್ಯಪ್ರಕಾಶ ಚಾಳಿ, ಸಿದ್ಧಲಿಂಗ ಉಪ್ಪಾರ, ನಾಗರಾಜ ಡೊಂಗರಗಾಂವ, ದೇವುದೋರೆ, ಕುಶಾಲ ಕಪನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT