ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ-ಹಾವೇರಿ ಬಸ್ ಸೇವೆಗೆ ಚಾಲನೆ

Published 13 ಜನವರಿ 2024, 14:55 IST
Last Updated 13 ಜನವರಿ 2024, 14:55 IST
ಅಕ್ಷರ ಗಾತ್ರ

ಕಲಬುರಗಿ: ಆಳಂದ-ಹಾವೇರಿ ವಾಯಾ ಮಾದನಹಿಪ್ಪರಗಾ ಮಾರ್ಗದ ಸಾರಿಗೆ ಬಸ್ ಕಾರ್ಯಾಚರಣೆಗೆ ಗುರುವಾರ ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಲಹೆಗಾರರೂ ಆಗಿರುವ ಆಳಂದ ಶಾಸಕ‌ ಬಿ.ಆರ್.ಪಾಟೀಲ ಚಾಲನೆ ನೀಡಿದರು.

ಈ ಬಸ್ ನಿತ್ಯ ಆಳಂದ ಬಸ್‌ ನಿಲ್ದಾಣದಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಮಾದನ ಹಿಪ್ಪರಗಾಗೆ 4.30ಕ್ಕೆ ತಲುಪಿ ಅಲ್ಲಿಂದ ಅಫಜಲಪುರ-ಸಿಂದಗಿ-ವಿಜಯಪುರ- ಜಮಖಂಡಿ- ಲೋಕಾಪುರ, ಸವದತ್ತಿ- ಧಾರವಾಡ- ಹುಬ್ಬಳ್ಳಿ ಮಾರ್ಗವಾಗಿ ಮರು ದಿನ ಬೆಳಿಗ್ಗೆ 6 ಗಂಟೆಗೆ ಹಾವೇರಿಗೆ ತಲುಪಲಿದೆ. ಇದೇ ಮಾರ್ಗದಲ್ಲಿ ನಿತ್ಯ ಸಂಜೆ 5.30 ಗಂಟೆಗೆ ಹಾವೇರಿಯಿಂದ ಹೊರಟು ಮರುದಿನ ಬೆಳಿಗ್ಗೆ 7 ಗಂಟೆಗೆ ಆಳಂದ ತಲುಪಲಿದೆ.

ಈ ಸಂದರ್ಭದಲ್ಲಿ ಮಾದನಹಿಪ್ಪರಗಾ ವಿರಕ್ತ ಮಠದ ಅಭಿನವ ಶಿವಲಿಂಗ ಸ್ವಾಮೀಜಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2ರ ಸಿದ್ದಪ್ಪ ಜಿ. ಗಂಗಾಧರ, ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರ ಕುಮಾರ ಡಿಗ್ಗಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಶೇಖ ಹುಸೇನ್, ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ, ಅಂಕಿಸಂಖ್ಯೆ ಅಧಿಕಾರಿ ಮಲ್ಲಿನಾಥ ಸರಸಂಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT