ಪರಿಹಾರಕ್ಕಾಗಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅಫಜಲಪುರದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶರು ₹ 34 ಲಕ್ಷ ಪರಿಹಾರ ಕೊಡುವಂತೆ ಆದೇಶಿಸಿದ್ದರು. 60 ದಿನದೊಳಗಾಗಿ ಪರಿಹಾರ ತುಂಬಬೇಕಾಗಿತ್ತು. ಆದರೆ 4 ವರ್ಷಗಳಿಂದ ಪರಿಹಾರದ ಹಣ ತುಂಬದೇ ನಿರ್ಲಕ್ಷ್ಯ ವಹಿಸಿದ್ದರಿಂದ ಅಫಜಲಪುರ ಜೆಎಂಎಫ್‌ಸಿ ನ್ಯಾಯಾಲಯ ಬಸ್ ಜಪ್ತಿ ವಾರಂಟ್ ಹೊರಡಿಸಿತ್ತು. ಕೋರ್ಟ್ ಸಿಬ್ಬಂದಿ ಶನಿವಾರ ಅಫಜಲಪುರ ಬಸ್ ನಿಲ್ದಾಣಕ್ಕೆ ಬಂದ ಚಿಕ್ಕೋಡಿ ಘಟಕದ (ಕೆಎ 32 ಎಫ್ 1172) ಬಸ್ ಅನ್ನು ಜಪ್ತಿ ಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.