ಸೇಡಂ: ‘ತಾಲ್ಲೂಕಿನ ತೆಲ್ಕೂರ, ಹಾಬಾಳ ಮತ್ತು ಯಡ್ಡಳ್ಳಿ ಸೀಮೆಯ ವಿವಿಧ ಪ್ರದೇಶಗಳಲ್ಲಿ ಮೀನು ಸಾಕಾಣಿಕೆಯ ಕೇಂದ್ರಗಳಿಗೆ ಆಹಾರವಾಗಿ ಪೂರೈಕೆ ಮಾಡುವ ಚಿಕನ್ ವೇಸ್ಟೇಜ್ ವಾಸನೆ ನಮಗೆ ಸಹಿಸಲಾಗುತ್ತಿಲ್ಲ’ ಎಂದು ಹಾಬಾಳ(ಟಿ) ಗ್ರಾಮಸ್ಥರು
ದೂರಿದ್ದಾರೆ.

‘ಮೀನುಗಾರಿಕೆ ಪ್ರದೇಶಕ್ಕೆ ತೆರಳಬೇಕಾದರೆ ಗ್ರಾಮಕ್ಕೆ ಹೊಂದಿಕೊಂಡ ರಸ್ತೆಗಳ ಮೂಲಕವೇ ತೆರಳಬೇಕಾಗುತ್ತದೆ. ಗ್ರಾಮದ ಒಳಗಡೆಯಿಂದ ಕೆಲವು ವಾಹನಗಳು ಹಗಲಿನಲ್ಲಿಯೇ ಸಂಚರಿಸುತ್ತಿವೆ. ವಾಹನಗಳು ತೆಲಂಗಾಣದಿಂದ ಬರುತ್ತಿವೆ. ಅವುಗಳು ಸಂಚರಿಸಿದ ನಂತರ 15-20 ನಿಮಿಷ ವಾಸನೆ ಇರುತ್ತದೆ. ಸಾರ್ವಜನಿಕರು ರಸ್ತೆ ಬದಿಯಲ್ಲಿ ಓಡಾಡುವುದು ದುಸ್ತರವಾಗುತ್ತಿದೆ’ ಎನ್ನುತ್ತಾರೆ ಹಾಬಾಳ ಹಾಗೂ ತೆಲ್ಕೂರ ಗ್ರಾಮಸ್ಥರು.

ಕರ್ನಾಟಕದ ಮೀನುಸಾಕಾಣಿಕೆಗೆ ನೆರೆ ರಾಜ್ಯದ ಹೈದರಾಬಾದ್, ಚವೆಲ್ಲಾ ಮತ್ತು ಮುನಿರಾಬಾದ್ ಸೇರಿದಂತೆ ವಿವಿಧ ಪ್ರದೇಶಗಳಿಂದ ಚಿಕನ್ ವೇಸ್ಟೇಜ್ ಪೂರೈಕೆ ಮಾಡಲಾಗುತ್ತಿದ್ದು,
ಈ ಕುರಿತು ಕಾನೂನಾತ್ಮಕ ಕ್ರಮದ ಅಗತ್ಯವಿದೆ. ಅಲ್ಲದೆ ಚಿಕನ್ ವೇಸ್ಟೇಜ್ ಫ್ರೆಶ್ ಆಗಿದ್ದರೆ ವಾಸನೆ ಬರುವುದಿಲ್ಲ. ಅನೇಕ ದಿನಗಳ ಸಂಗ್ರಹ ಮತ್ತು ಪೂರೈಕೆಯ ವಿಳಂಬ ನೀತಿಯಿಂದಾಗಿ ದುರ್ನಾತ ಬೀರುತ್ತದೆ. ‘ಕರ್ನಾಟಕದವರಿಗೇ ಚಿಕನ್ ವೇಸ್ಟೇಜ್ ಪೂರೈಕೆ ಹಾಗೂ ಸ್ಥಳೀಯರಿಗೆ ನೀಡಬೇಕು’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಮೌನೇಶ ಬೆನಕನಹಳ್ಳಿ.

ಮೀನುಸಾಕಾಣಿಕೆಗೆ ನೆರೆಯ ರಾಜ್ಯದ ತ್ಯಾಜ್ಯ ಸಾರ್ವಜನಿಕರಿಗೆ ಅನಾರೋಗ್ಯದ ಭೀತಿ ಕಾನೂನಾತ್ಮಕ ಕ್ರಮಕ್ಕೆ ಆಗ್ರಹ

ಮೀನು ಸಾಕಾಣಿಕೆ ಕೇಂದ್ರಕ್ಕೆ ಚಿಕನ್ ವೇಸ್ಟೇಜ್ ತೆಗೆದುಕೊಂಡು ಹೋಗುವ ವಾಹನಗಳಲ್ಲಿನ ದುರ್ನಾತದಿಂದ ತೊಂದರೆಯಾಗುತ್ತಿದ್ದು ಇದು ನಿಲ್ಲಬೇಕು
ಸತೀಶ ಪೂಜಾರಿ ಹಾಬಾಳ್ (ಟಿ) ಗ್ರಾಮಸ್ಥ

ಜೈವಿಕ ತ್ಯಾಜ್ಯ ತುಂಬಿಕೊಂಡು ಹೋಗುವ ವಾಹನಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದು ಅವರ ಮಾಹಿತಿ ಮೇರೆಗೆ ವಾಹನ ಸಮೇತ ಹಿಡಿದು ಸೇಡಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ
ಸಂಗಯ್ಯಸ್ವಾಮಿ ಪಿಡಿಒ ತೆಲ್ಕೂರ

ಕರ್ನಾಟಕದಲ್ಲಿನ ಮೀನು ಸಾಕಾಣಿಕೆಗೆ ತೆಲಂಗಾಣದಿಂದ ಮೀನುಗಳಿಗೆ ಆಹಾರ ಪೂರೈಕೆ ಮಾಡುವುದು ಸರಿಯಲ್ಲ. ನಮ್ಮ ರಾಜ್ಯದವರೇ ಆಹಾರ ಪೂರೈಕೆ ಮಾಡಬೇಕು
ಮೌನೇಶ ಬೆನಕನಹಳ್ಳಿ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ

ಎಫ್ಐಆರ್ ಆದರೂ ನಿಲ್ಲದ ಓಡಾಟ ‘ತೆಲ್ಕೂರ ಹಾಗೂ ಹಾಬಾಳ್(ಟಿ) ಮೀನು ಸಾಕಾಣಿಕೆ ಮಾಡುತ್ತಿರುವ ಕೇಂದ್ರಗಳಿಗೆ ಪೂರೈಕೆ ಮಾಡುವ ತೆಲಂಗಾಣದ ರಾಜ್ಯದ ವಾಹನವನ್ನು ತೆಲ್ಕೂರ ಗ್ರಾಮ ಪಂಚಾಯಿತಿ ಅಧಿಕಾರಿ ಹಿಡಿದಿದ್ದರು. ‘ಸಾರ್ವಜನಿಕರಿಗೆ ಹಾಗೂ ಕುಡಿವ ನೀರಿಗೆ ತೊಂದರೆ ಕಾರಣ ಕ್ರಮ ಕೈಗೊಳ್ಳುವಂತೆ ಸೇಡಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅದಾದ ನಂತರವೂ ವಾಹನಗಳು ನಿರಂತರ ಓಡಾಡುತ್ತಿವೆ’ ಎಂದು ಜನ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.