ಗುರುವಾರ , ಅಕ್ಟೋಬರ್ 22, 2020
24 °C

ಕಲಬುರ್ಗಿ: ಕೋವಿಡ್ ಲ್ಯಾಬ್‌ಗೆ ಜಿಲ್ಲಾಡಳಿತದಿಂದ ₹ 84 ಲಕ್ಷದ ಚೆಕ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋವಿಡ್-19 ಲ್ಯಾಬ್ಗೆ ಜಿಲ್ಲಾಡಳಿತದಿಂದ ₹ 84 ಲಕ್ಷ ಮೊತ್ತದ ಚೆಕ್ಕನ್ನು ವಿ.ವಿ. ಸಮ ಕುಲಪತಿ ಪ್ರೊ.ಜಿ.ಆರ್. ನಾಯಕ್ ಅವರಿಗೆ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಡಾ.ಉಮೇಶ ಜಾಧವ್ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಸಿಯುಕೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಐಸಿಎಂಆರ್ ಅನುಮತಿ ನೀಡಲಾಗಿದ್ದರೂ ಯಾಕೆ ಲ್ಯಾಬ್ ಕಾರ್ಯಾರಂಭಗೊಂಡಿಲ್ಲ ಎಂದು ಪ್ರಶ್ನಿಸಲಾಯಿತು.

ಇದಕ್ಕೆ ಡಾ. ಜಿ.ಆರ್. ನಾಯಕ ಅವರು ಲ್ಯಾಬ್ ಗೆ ವಿ.ವಿ.ಯಿಂದ ₹ 35 ಲಕ್ಷ  ಖರ್ಚು ಮಾಡಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಉಳಿದ ಹಣ ಕ್ರೋಡೀಕರಿಸಲಾಗುತ್ತಿದೆ ಎಂದರು. 

ಇದಕ್ಕೆ ಸಂಸದರು ಉಳಿದ ₹ 84 ಲಕ್ಷವನ್ನು ಜಿಲ್ಲಾಡಳಿತ ದಿಂದ ನೀಡಲಾಗುವುದು ಎಂದು ಹೇಳಿ ಸಭೆಯಲ್ಲೆ ಚೆಕ್ ಬರೆಯಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು. 10 ನಿಮಿಷದಲ್ಲಿ ಯೇ ಚೆಕ್ ಸಿದ್ದಗೊಳಿಸಿ ಸಮ ಕುಲಪತಿಗಳಿಗೆ ಸಲ್ಲಿಸಲಾಯಿತು. ವಾರದೊಳಗೆ ಉದ್ಘಾಟನೆಯಾಗಬೇಕೆಂದು ಸಂಸದ ಜಾಧವ ಸೂಚಿಸಿದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು