ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಕೊರೊನಾ ಕಾರ್ಮೋಡ; ಖಗೋಳಾಸಕ್ತರಿಗೆ ನಿರಾಸೆ

Last Updated 21 ಜೂನ್ 2020, 8:14 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಇನ್ನೂ ಹತೋಟಿಗೆ ಬಾರದ ಕೊರೊನಾ ವೈರಾಣು ಉಪಟಳದ ಕಾರಣ, ಸೂರ್ಯಗ್ರಹಣದ ವಿಸ್ಮಯ ಸವಿಯಲಾಗದೆ ಜನ ನಿರಾಶರಾದರು.

ಖಗೋಳ ವಿಸ್ಮಯಗಳು ಸಂಭವಿಸಿದಾಗಲೆಲ್ಲ ಇಲ್ಲಿನ ಕಲಬುರ್ಗಿ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕದ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗತ್ತಿತ್ತು. ವಿವಿಧ ವಿಜ್ಞಾನ, ಎಂಜಿನಿಯರಿಂಗ್ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಇದನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ಆದರೆ, ಕೋವಿಡ್-19 ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇರುವ ಕಾರಣ, ಈ ಬಾರಿ ಎಲ್ಲಿಯೂ ಗ್ರಹಣ ವೀಕ್ಷಣೆಗೆ ತಯಾರಿ ಮಾಡಿಲ್ಲ.

ಹಲವು ಮಕ್ಕಳು, ಪಾಲಕರು ಟೆರೆಸ್ ಮೇಲೆ ಹತ್ತಿ ಕಪ್ಪು ಕನ್ನಡಕದ ಮೂಲಕ ಸೂರ್ಯ ಚಂದ್ರರ ಚಲನೆ ವೀಕ್ಷಿಸಿದರು. ಆದರೆ, ಬೆಳಿಗ್ಗೆಯಿಂದಲೂ ಮೋಡ ಕವಿದ ಕಾರಣ ಬಹಳಷ್ಟು ಖಗೋಳಾಸಕ್ತರು ನಿರಾಶರಾದರು.

ಮಧ್ಯಾಹ್ನ 12ರ ನಂತರ ಮೋಡಗಳು ಚದುರಿದಾಗ ದರ್ಶನ ನೀಡಿದ 'ಭಾಸ್ಕರ'ನು ಕ್ಯಾಮೆರಾ ಕಣ್ಣಲ್ಲಿ ಅರ್ಧ ಚಂದ್ರನಂತೆ ಕಂಡು ಅಚ್ಚರಿ ಮೂಡಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT