ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ

ಮಳೆಯಾಶ್ರಿತ ಹೆಕ್ಟೇರ್‌ಗೆ ಪರಿಹಾರ ಘೋಷಿಸಿದ್ದು ₹17,000; ಬಂದಿದ್ದು ₹6,800
ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published : 5 ಡಿಸೆಂಬರ್ 2025, 23:30 IST
Last Updated : 5 ಡಿಸೆಂಬರ್ 2025, 23:30 IST
ಫಾಲೋ ಮಾಡಿ
Comments
‘ರೈತರಿಗೆ ಮಾಡಿದ ಮೋಸ’
‘ಮುಖ್ಯಮಂತ್ರಿ ಅವರೇ ಶೇ 80ರಷ್ಟು ಬೆಳೆಹಾನಿ ಆಗಿದೆ ಎಂದಿದ್ದರು. ಆದರೆ ಕೃಷಿ ಅಧಿಕಾರಿಗಳು ವಾಸ್ತವ ಅರಿಯದೇ ಒಂದು ಒಂದೂವರೆ ಎಕರೆ ಬೆಳೆಹಾನಿ ತೋರಿಸಿದ್ದಾರೆ. ಇದರಿಂದ ಯಾವ ರೈತರಿಗೂ ಪೂರ್ಣ ಪರಿಹಾರ ಸಿಕ್ಕಿಲ್ಲ. ಇದು ರೈತರಿಗೆ ಮಾಡಿದ ಮೋಸ’ ಎಂದು ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಆರೋಪಿಸುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಅಳಲು
ಮುಖ್ಯಮಂತ್ರಿ ಮತ್ತು ಕೃಷಿ ಇಲಾಖೆಯ ‘ಜೆಡಿಎಕಲಬುರಗಿ’ ಫೇಸ್‌ಬುಕ್‌ ಪೇಜ್‌ ಮೂಲಕವು ಹಲವು ರೈತರು ಪರಿಹಾರ ಕುರಿತು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಂತೋಷ ಕನ್ನೊಳ್ಳಿ ಅವರು ‘ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನಲ್ಲಿ ಹೆಕ್ಟೇರ್‌ ನೀರಾವರಿ ಬೆಳೆಗೆ ಕೇವಲ ₹11900 ಜಮಾ ಆಗಿದೆ’ ಎಂದು ದೂರಿದ್ದಾರೆ. ಪವನ ನಿಂಬಾಳ ಅವರು ‘ಹೇಳಿದ್ದು ₹8500. ಬಂದಿದ್ದು ₹5500 ₹6800 ಏಕೆ’ ಎಂದು ಪ್ರಶ್ನಿಸಿದ್ದಾರೆ. ‘ಯಾವ ಲೆಕ್ಕದಲ್ಲಿ ₹3500 ಪರಿಹಾರ ಹಾಕಿದ್ದೀರಿ?’ ಎಂದು ಮಂಜು ರೊಟ್ಟಿ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT