ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಮ್ಮ ಬೆಳೆ ಸಮೀಕ್ಷೆ ನೀವೇ ಮಾಡಿ’

Published 16 ಜುಲೈ 2023, 12:44 IST
Last Updated 16 ಜುಲೈ 2023, 12:44 IST
ಅಕ್ಷರ ಗಾತ್ರ

ಯಡ್ರಾಮಿ: ತಾಲ್ಲೂಕಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಸೇರಿದಂತೆ ಇತರೆ ಮಾಹಿತಿ ದಾಖಲಿಸಲು ರಾಜ್ಯ ಸರ್ಕಾರ ರೈತರ ಮೊಬೈಲ್ ಆ್ಯಪ್ ಮೂಲಕ ಮುಂಗಾರು ರೈತರ ಬೆಳೆ ಸಮೀಕ್ಷೆ 2023-24 ಬಿಡುಗಡೆ ಮಾಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ಸಜ್ಜನ ಕೋರಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಹೊಲದ ಸರ್ವೇ ನಂಬರ್‌ ಹಾಗೂ ಬಿತ್ತನೆಯಾದ ಬೆಳೆ ಮಾಹಿತಿಯನ್ನು ರೈತರು, ನಿಖರವಾಗಿ ದಾಖಲಿಸಲು ರಾಜ್ಯ ಸರ್ಕಾರ ಆ್ಯಪ್ ಸಿದ್ಧಪಡಿಸಿ, ಬಿಡುಗಡೆ ಮಾಡಿದೆ. ರೈತರು ಪ್ಲೇ-ಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಂತರ ಆಧಾರ್ ಕಾರ್ಡ್ ಸಂಖ್ಯೆ ಬಳಸಿಕೊಂಡು ಆ್ಯಪ್ ಆಪ್ರಾರಂಭಿಸಿ ಜಮೀನಿನಲ್ಲಿ ಬೆಳೆದ ಬೆಳೆ ಭಾವಚಿತ್ರ ತೆಗೆದು ಬೆಳೆವಾರು, ಬೆಳೆಯ ಕ್ಷೇತ್ರ ನಮೂದಿಸಿ ಸರಿಯಾಗಿ ಮಾಹಿತಿ ದಾಖಲಿಸಬೇಕು ಎಂದು ತಿಳಿಸಿದರು.

ರೈತರು, ತಮ್ಮ ಮೊಬೈಲ್‌ ಬಳಸಿ, ತಾವೇ ಬೆಳೆ ಮಾಹಿತಿ ದಾಖಲಿಸುವುದರಿಂದ ಮಾಹಿತಿ ನಿಖರವಾಗಿರುತ್ತದೆ. ಇದರಿಂದ ತಪ್ಪುಗಳು ಆಗುವ ಸಾಧ್ಯತೆ ಇರುವುದಿಲ್ಲ. ಸರ್ವೇ ನಂಬರ್ ಹಿಸ್ಸಾವಾರು ಬೆಳೆ ಸರಿಯಾಗಿ ದಾಖಲಾಗುತ್ತದೆ. ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಬೆಳೆ ಸಮೀಕ್ಷೆ ಮಾಹಿತಿ ಬಳಸುತ್ತಿರುವುದರಿಂದ ರೈತರಿಗೆ ಅಲೆದಾಟ ತಪ್ಪುತ್ತದೆ. ಬೆಳೆ ವಿಮೆ, ಇನ್‌ಪುಟ್ ಸಬ್ಸಿಡಿ, ಬೆಳೆಸಾಲ ಹಾಗೂ ಕೀಟರೋಗಕ್ಕೆ ಒಳಗಾದ ಬೆಳೆಗೆ ಸರ್ಕಾರದಿಂದ ಪರಿಹಾರ ಧನ ಸಹಾಯ ನೀಡಲು ಬೆಳೆ ಸಮೀಕ್ಷೆ ಮಾಹಿತಿ ಬಳಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ಖುದ್ದಾಗಿ ದಾಖಲಿಸಿ, ನನ್ನ ಬೆಳೆ ನನ್ನ ಸಮೀಕ್ಷೆ ಎನ್ನುವ ಬೆಳೆ ಸಮೀಕ್ಷೆ ಮುಂಗಾರು–2023 ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT