ಶನಿವಾರ, ಮೇ 28, 2022
29 °C
ದೇವನತೆಗನೂರು; ಜನಪದ ಉತ್ಸವ ಕಾರ್ಯಕ್ರಮ

‘ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಶಹಾಬಾದ್: ಜನಪದವು ನಶಿಸಿ ಹೋಗದಂತೆ ಹಿರಿಯ ತಲೆಮಾರಿನವರು ತಮ್ಮಲ್ಲಿನ ಕಲೆಯನ್ನು ಯುವ ಸಮುದಾಯಕ್ಕೆ ಕಲಿಸುವ ಮೂಲಕ ಜಾನಪದ ಉಳಿಸಬೇಕಾಗಿದೆ ಎಂದು ಸಿದ್ದೇಶ್ವರ ಶಾಸ್ತ್ರಿಗಳು
ಹೇಳಿದ್ದಾರೆ.

ತಾಲ್ಲೂಕಿನ ದೇವನತೆಗನೂರ ಗ್ರಾಮದಲ್ಲಿ ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಗ್ರಾಮೀಣ
ಜನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು.

ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್‌ ಕಾರ್ಯದರ್ಶಿ ಮಹೇಶ ದೇವಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದೇಶದ ಭವ್ಯ ಪರಂಪರೆ ಸಾರುವ ಜನಪದ ಸಂಸ್ಕೃತಿ ಭಾರತೀಯರ ಜೀವಾಳ. ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ
ವರ್ಗಾಯಿಸಿದರೆ, ಅವರ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ’
ಎಂದರು.

ರೈತ ಸಂಘದ ಅಧ್ಯಕ್ಷ ಅಪ್ಪಾಸಾಬ ಸರಡಗಿ, ಹಣಮಂತರಾಯ ಶಂಕರವಾಡಿ, ಕಲ್ಯಾಣಪ್ಪ ಸಿರವಾಳ, ಸಿದ್ದು ದೇವಣಿ ಸಿದ್ದಾರಾಮ ಸೇರಿದಂತೆ ಅನೇಕರು ಇದ್ದರು.
ಜಾನಪದ ಗಾಯನವನ್ನು ಸಾವಿತ್ರಿ.ಬಿ ತತ್ವಪದ, ಸಿದ್ದು.ಎಸ್
ಸೋಭಾನ ಪದ, ಸಂಗೀತಾ.ಡಿ
ಜೋಗುಳ ಪದ ಹಾಡಿದರು, ಶ್ರುತಿ ದತ್ತುಕುಮಾರ ಅವರಿಂದ ಭರತ ನಾಟ್ಯ ನಡೆಯಿತು.
ಚೇತನಕುಮಾರ ಬೀದಿಮನಿ ಮತ್ತು ಶಿವಕುಮಾರ ಅವರಿಂದ ಹಾಮೋನಿಯಂ, ಸೋಮು ಕಲ್ಯಾಣಿ ಮತ್ತು ವಿಜಯಕುಮಾರ ಅವರು ತಬಲಾ ಸೇವೆ ನೀಡಿದರು.

ಉತ್ಸವದಲ್ಲಿ ಕಲಾವಿದರು, ಗ್ರಾಮಸ್ಥರು, ಯುವಕರು ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.